ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಗ್-27 ಗೆ ವಿದಾಯ

Update: 2019-12-27 17:01 GMT
file photo

ಹೊಸದಿಲ್ಲಿ, ಡಿ. 27: ಇಪ್ಪತ್ತು ವರ್ಷಗಳ ಹಿಂದೆ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದ ಯುದ್ಧ ವಿಮಾನ ಮಿಗ್-27ನ್ನು ಕಾರ್ಯಾಚರಣೆಯಿಂದ ಹಿಂದೆ ತೆಗೆದುಕೊಳ್ಳಲಾಗಿದೆ. ಏಳು ಮಿಗ್-27 ವಿಮಾನಗಳನ್ನು ಒಳಗೊಂಡ ಸ್ಕ್ವಾಡ್ರನ್ ಶುಕ್ರವಾರ ಜೋಧಪುರ ವಾಯು ನೆಲೆಯ ಆಕಾಶದಲ್ಲಿ ಕೊನೆಯ ಹಾರಾಟ ನಡೆಸಿತು.

ದೇಶಕ್ಕಾಗಿ 3 ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ನೀಡುವ ಮೂಲಕ ಕುಂದಿಲ್ಲದ ದಾಖಲೆಯನ್ನು ಭಾರತದಲ್ಲಿ ‘ಬಹದ್ದೂರ್’ ಎಂಬ ಕೋಡ್ ಹೆಸರಿನಲ್ಲಿ ಕರೆಯಲಾಗುವ ಮಿಗ್-27 ನಿರ್ಮಿಸಿದೆ. ಮಿಗ್-27 ಯುದ್ಧ ಹಾಗೂ ಶಾಂತಿ ಕಾಲದಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಕಾರ್ಗಿಲ್ ಯುದ್ಧದ ಸಂದರ್ಭ ಶತ್ರುಗಳ ಮೇಲೆ ಕರಾರುವಕ್ಕಾಗಿ ರಾಕೆಟ್ ಹಾಗೂ ಬಾಂಬ್‌ಗಳನ್ನು ಎಸೆಯುವ ಮೂಲಕ ಮಿಗ್-27 ಇತಿಹಾಸ ಸೃಷ್ಟಿಸಿದೆ. ಮೇಲ್ದರ್ಜೆಗೇರಿಸಲಾಗಿದ್ದ ಮಿಗ್-27 ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮರಾಭ್ಯಾಸಗಳಲ್ಲಿ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News