×
Ad

ತುಕ್ಡೆ-ತುಕ್ಡೆ ಗ್ಯಾಂಗ್‌ನಲ್ಲಿರುವುದು ದುರ್ಯೋಧನ ಮತ್ತು ದುಶ್ಯಾಸನ,ಇಬ್ಬರೂ ಬಿಜೆಪಿಯವರೇ: ಯಶವಂತ ಸಿನ್ಹಾ

Update: 2019-12-27 22:52 IST
file photo

ಹೊಸದಿಲ್ಲಿ,ಡಿ.27: ಭಾರತದಲ್ಲಿಯ ಅತ್ಯಂತ ಅಪಾಯಕಾರಿ ತುಕ್ಡೆ-ತುಕ್ಡೆ ಗ್ಯಾಂಗ್ ದುರ್ಯೋಧನ ಮತ್ತು ದುಶ್ಯಾಸನ ಹೀಗೆ ಇಬ್ಬರನ್ನು ಹೊಂದಿದ್ದು,ಅವರಿಬ್ಬರೂ ಬಿಜೆಪಿಯವರೇ ಆಗಿದ್ದಾರೆ. ಅವರ ಬಗ್ಗೆ ಎಚ್ಚರಿಕೆಯಿರಲಿ ಎಂದು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರು ಶುಕ್ರವಾರ ಟ್ವೀಟಿಸಿದ್ದಾರೆ.

ಇದಕ್ಕೂ ಮುನ್ನ ಸಿಎಎ ಕುರಿತು ಸರಕಾರದ ವಿರುದ್ಧ ದಾಳಿ ನಡೆಸಿದ್ದ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು,ನಿಜವಾದ ತುಕ್ಡೆ-ತುಕ್ಡೆ ಗ್ಯಾಂಗ್ ದಿಲ್ಲಿಯಲ್ಲಿ ಕುಳಿತಿರುವ ಭಾರತದ ಆಡಳಿತಗಾರರಾಗಿದ್ದಾರೆ. ಅವರು ನಿಜವಾದ ದೇಶ ವಿಭಜಕರಾಗಿದ್ದಾರೆ. ಅವರು ದೇಶವನ್ನು ಧರ್ಮದ ಮಾತ್ರವಲ್ಲ,ಭಾಷೆಯ ಆಧಾರದಲ್ಲೂ ಒಡೆಯುತ್ತಿದ್ದಾರೆ ಮತ್ತು ನಾವು ಅವರನ್ನು ಅಹಿಂಸಾತ್ಮಕವಾಗಿ ಎದುರಿಸುತ್ತೇವೆ ಎಂದು ಹೇಳಿದ್ದರು.

ಪ್ರತಿಪಕ್ಷವು ದೇಶದ ವಾತಾವರಣವನ್ನು ಕೆಡಿಸುತ್ತಿದೆ ಎಂದು ಗುರುವಾರ ಆರೋಪಿಸಿದ್ದ ಗೃಹಸಚಿವ ಅಮಿತ್ ಶಾ ಅವರು,ತುಕ್ಡೆ-ತುಕ್ಡೆ ಗ್ಯಾಂಗನ್ನು ದಂಡಿಸುವ ಕಾಲವೀಗ ಬಂದಿದೆ ಎಂದು ಹೇಳಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News