×
Ad

ಚಬಹಾರ್ ಬಂದರು ಅಭಿವೃದ್ಧಿಗೆ ವೇಗ ನೀಡಲು ಭಾರತ, ಇರಾನ್ ನಿರ್ಧಾರ :ವಿದೇಶ ಸಚಿವ ಎಸ್. ಜೈಶಂಕರ್

Update: 2019-12-27 23:30 IST

ಟೆಹರಾನ್, ಡಿ. 27: ಇರಾನ್‌ನ ಮಹತ್ವದ ಚಬಹಾರ್ ಬಂದರಿನ ಅಭಿವೃದ್ಧಿ ಪ್ರಕ್ರಿಯೆಗೆ ವೇಗ ನೀಡಲು ಭಾರತ ಮತ್ತು ಇರಾನ್ ಒಪ್ಪಿಕೊಂಡಿವೆ ಎಂದು ಇರಾನ್‌ಗೆ ನೀಡಿದ ಭೇಟಿಯ ಬಳಿಕ ಭಾರತದ ವಿದೇಶ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಚಬಹಾರ್ ಬಂದರು ಪಾಕಿಸ್ತಾನದ ಗಡಿಯಿಂದ ಪಶ್ಚಿಮಕ್ಕೆ ಸುಮಾರು 100 ಕಿ.ಮೀ. ದೂರದಲ್ಲಿದೆ.

ಕಳೆದ ವರ್ಷ ಅಮೆರಿಕ ಇರಾನ್ ಮೇಲೆ ವಿಧಿಸಿದ ದಿಗ್ಬಂಧನಗಳ ವ್ಯಾಪ್ತಿಯಿಂದ ಈ ಬಂದರನ್ನು ಹೊರಗಿಡಲಾಗಿದೆಯಾದರೂ, ಅಲ್ಲಿನ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ.

‘‘ಭಾರತ-ಇರಾನ್ ಜಂಟಿ ಕಮಿಶನ್ ಸಭೆ ಈಗಷ್ಟೇ ಮುಗಿಯಿತು. ನಮ್ಮ ನಡುವಿನ ಸಹಕಾರದ ಸಮಗ್ರ ವ್ಯಾಪ್ತಿಯನ್ನು ಪರಿಶೀಲಿಸಲಾಯಿತು. ಚಬಹಾರ್ ಬಂದರಿನ ಅಭಿವೃದ್ಧಿಯನ್ನು ಕ್ಷಿಪ್ರಗೊಳಿಸಲು ನಿರ್ಧರಿಸಲಾಯಿತು’’ ಎಂಬುದಾಗಿ ತನ್ನ ಇರಾನ್ ಭೇಟಿಯ ಕೊನೆಯಲ್ಲಿ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News