×
Ad

ಮಂಗಳೂರು: ಗೋಲಿಬಾರ್ ನಲ್ಲಿ ಮೃತರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ ನಿಂದ ಪರಿಹಾರ ವಿತರಣೆ

Update: 2019-12-28 12:30 IST

ಮಂಗಳೂರು: ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಕ್ಕೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಿಂದ ಇಂದು ಪರಿಹಾರ ವಿತರಿಸಲಾಯಿತು.

ತೃಣಮೂಲ ಕಾಂಗ್ರೆಸ್ ನಿಂದ ತಲಾ 5 ಲಕ್ಷ ರೂ. ಪರಿಹಾರವನ್ನು ಮಂಗಳೂರಿಗೆ ಬಂದ ತೃಣಮೂಲ ಕಾಂಗ್ರೆಸ್ ನಿಯೋಗ ವಿತರಿಸಿತು.

ಮಾಜಿ ಕೇಂದ್ರ ಸಚಿವ ದಿನೇಶ್ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯ ನದಿಮುಲ್ ಹಕ್ ಅವರು ಇಂದು ಮುಂಜಾನೆ ಮಂಗಳೂರಿಗೆ ಆಗಮಿಸಿ ಕುದ್ರೋಳಿಯಲ್ಲಿರುವ ನೌಸೀನ್ ಮತ್ತು ಕಂದಕ್ ನಲ್ಲಿರುವ ಜಲೀಲ್ ಮನೆಗೆ ತೆರಳಿ ಕುಟುಂಬಿಕರಿಗೆ ಸಾಂತ್ವನ ವ್ಯಕ್ತಪಡಿಸಿ, ತಲಾ 5  ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News