ಮೊಂಟೆಪದವು : ಸೌಹಾರ್ದ ನಾಗರಿಕ ಒಕ್ಕೂಟ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಮೊಂಟೆಪದವು : ಸೌಹಾರ್ದ ನಾಗರಿಕ ಒಕ್ಕೂಟ ಮೊಂಟೆಪದವು ಇದರ ವತಿಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಖಂಡಿಸಿ ಪ್ರತಿಭಟನೆ ಆಗೂ ಬಿತ್ತಿ ಪತ್ರ ಪ್ರದರ್ಶಿಸಲಾಯಿತು.
ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಸಿದ್ದಿಕ್ ಸಹದಿ ಮಿತ್ತೂರು ಮಾತನಾಡಿ, ಈ ದೇಶದಲ್ಲಿ ದಿನಕೊಂದು ಕಾನೂನು ಬರುತ್ತಿದೆ ಇಂತಹ ಅನಾಗರಿಕ ಕಾಯ್ದೆಯನ್ನು ಸೌಹಾರ್ದ ಬಯಸುವ ಎಲ್ಲಾ ಸಮುದಾಯದ ಜನಾಂಗ ವಿರೋಧಿಸುವ ಅನಿವಾರ್ಯತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಝಾಕ್ ಮೊಂಟೆಪದವು ಈ ನಾಡಿನ ಐಕ್ಯತೆ, ಹಿತವನ್ನು ಕಾಪಾಡೋದು ನಮ್ಮೆಲರ ಆಧ್ಯ ಕರ್ತವ್ಯವಾಗಿದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಿಲ್ಲಿಸುವವರೆಗೆ ನಮ್ಮ ಹೋರಾಟ ನಿರಂತರ ಎಂದರು.
ಈ ಸಂದರ್ಭ ಮೊಂಟೆಪದವು ಜುಮಾ ಮಸೀದಿಯ ಅಧ್ಯಕ್ಷ MM ಮಹಮ್ಮದ್, ಕಾರ್ಯದರ್ಶಿ ಅಬ್ದುಲ್ ಖಾದರ್, ಪಂಚಾಯತ್ ಸದಸ್ಯರಾದ ಆಸೀಫ್, ಇಸ್ಮಾಯಿಲ್ (ಮೋನು), ಫಯಾಝ್ ಭಾಗವಹಿಸಿದರು. ಸಾಮಾಜಿಕ ಕಾರ್ಯಕರ್ತರಾದ MM ಕುಂಞಿ, ಪ್ರತಿಭಟನೆಯ ಆಯೋಜಕರಾದ ಸಂಶುದ್ದೀನ್ UT, ಹನೀಫ್ ಕಡಬ, ಷರೀಫ್, ಹರಿಫ್ ತೋಟಲ್ ಹಾಗು ಇತರರು ಭಾಗವಹಿಸಿದ್ದರು.