ಕಲ್ಲಡ್ಕ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಬಂಟ್ವಾಳ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮಸೀದಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಮಸೀದಿಯ ಖತೀಬರಾದ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಮಾತನಾಡಿ ನಿಂತ ನೆಲ ಕುಸಿಯುವಾಗ ಹೋರಾಟ ಅನಿವಾರ್ಯ. ಈ ಪವಿತ್ರ ಭೂಮಿ, ಆಕಾಶ, ಪರ್ವತ, ಮಾನವರಾಶಿ ಸರ್ವವೂ ಸೃಷ್ಠಿಕರ್ತನ ನಿಯಂತ್ರದಲ್ಲಿದೆ. ಇದರ ವಿರುದ್ಧ ಧ್ವನಿ ಎತ್ತುವ ಅಧಿಕಾರ ಯಾರಿಗೂ ಇಲ್ಲ. ಈ ಪವಿತ್ರ ದೇಶದ ಸ್ವಾತಂತ್ರಕ್ಕಾಗಿ ಜಾತಿ, ಮತ, ಧರ್ಮ ನೋಡದೆ ಎಲ್ಲರೂ ಒಂದಾಗಿ ಹೋರಾಡಿದ್ದೇವೆ. ಈಗ ನಮ್ಮ ಪೌರತ್ವವನ್ನೇ ಪ್ರಶ್ನಿಸುವುದು ಹಾಸ್ಯಾಸ್ಪದ. ಯಾವುದೇ ಕಾರಣಕ್ಕೂ ಈ ಭವ್ಯ ಭಾರತವನ್ನು ಒಡೆಯಲು ಇಲ್ಲಿನ ಮುಸ್ಲಿಮರು ಎಂದಿಗೂ ಬಿಡುವುದಿಲ್ಲ. ಉನ್ನತ ಸ್ಥಾನಕ್ಕೆ ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಇದನ್ನು ಅರಿಯಬೇಕು. ಒಡೆದು ಅಳುವ ನೀತಿಯನ್ನು ನಿಲ್ಲಿಸಬೇಕು ಎಂದು ಕರೆಕೊಟ್ಟರು.
ಜಮಾಅತ್ ಅಧ್ಯಕ್ಷರಾದ ಹಾಜಿ. ಜಿ. ಅಬೂಬಕ್ಕರ್, ಕಾರ್ಯದರ್ಶಿ ಹಾಜಿ. ಕೆ. ಅಬ್ದುಲ್ ಹಮೀದ್, ಆಡಳಿತ ಸಮಿತಿ ಸದಸ್ಯರು, ಜಮಾಅತಿನ ಸದಸ್ಯರು ಪಾಲ್ಗೊಂಡರು.