ದೊಣ್ಣೆಯಿಂದ ಹೊಡೆದು ತಮ್ಮನ ಕೊಲೆ ಪ್ರಕರಣ : ಆರೋಪಿ ಸೆರೆ
Update: 2019-12-28 20:13 IST
ಬಂಟ್ವಾಳ : ಮರದ ದೊಣ್ಣೆಯಿಂದ ಹೊಡೆದು ತಮ್ಮನನ್ನು ಕೊಲೆ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಮೆಲ್ಕಾರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮೆಲ್ಕಾರ್ ಸಮೀಪದ ಬೋಳಂಗಡಿ ಕಿಲ್ಲೆ ಯಾನೆ ಸಿರಿಲ್ ಲೋಬೊ ಬಂಧಿತ ಆರೋಪಿ.
ಮುಯ್ಯ ಯಾನೆ ಲಿಯೋ ಲೋಬೊ ಕೊಲೆಯಾದ ವ್ಯಕ್ತಿ. ಅಣ್ಣ ತಮ್ಮಂದಿರ ನಡುವೆ ಡಿ. 26ರಂದು ಕ್ಷುಲಕ ಕಾರಣಕ್ಕೆ ಜಗಳ ನಡೆದು, ಅಣ್ಣ ತಮ್ಮನಿಗೆ ದೊಣ್ಣೆಯಿಂದ ಹೊಡೆದ ಪರಿಣಾಮ ತಮ್ಮ ಲಿಯೋ ಸ್ಥಳದಲ್ಲೇ ಮೃತಪಟ್ಟಿದ್ದರು.
ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ನೇತೃತ್ವದ ತಂಡ ಆರೋಪಿ ಸಿರಿಲ್ ಎಂಬಾತನನ್ನು ಮೆಲ್ಕಾರಿನಲ್ಲಿ ಬಂಧಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.