ಮಂಗಳೂರಿನಲ್ಲಿ ಅಕಾಲಿಕ ಮಳೆ
Update: 2019-12-28 21:26 IST
ಮಂಗಳೂರು, ಡಿ.28: ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಚಳಿಯ ಆರ್ಭಟವಿದ್ದರೆ, ಇತ್ತ ಕರಾವಳಿ ಪ್ರದೇಶದ ಮಂಗಳೂರು, ಸುರತ್ಕಲ್ ಸಹಿತ ವಿವಿಧೆಡೆ ಗುಡುಗು, ಮಿಂಚು ಸಹಿತ ಅಕಾಲಿಕ ಮಳೆ ಸುರಿಯುತ್ತಿದೆ.
ರಾಜ್ಯದಲ್ಲಿ ಚಳಿಗಾಲವಿದ್ದರೂ ಸಮುದ್ರದ ತಡದಲ್ಲಿನ ಮಂಗಳೂರಿನಲ್ಲಿ ರಾತ್ರಿ 8ರಿಂದ ಸಣ್ಣ ಪ್ರಮಾಣದ ಮಳೆ ಬೀಳುತ್ತಿದೆ. ಮಧ್ಯಾಹ್ನ ವಾತಾರಣದಲ್ಲಿ ಬಿಸಿ ಏರಿಕೆ ಕಂಡುಬಂದಿತ್ತು. ಸಂಜೆ ಮೋಡ ಕವಿತ ವಾತಾವರಣ ಏರ್ಪಟ್ಟಿತು. ರಾತ್ರಿಯಾಗು ತ್ತಿದ್ದಂತೆಯೇ ಸಾಧಾರಣ ಮಳೆ ಸುರಿಯುತ್ತಿದೆ.