ಅಯೋಧ್ಯೆಯಲ್ಲಿ ಫೆಬ್ರವರಿ 25ರವರೆಗೆ ನಿಷೇಧಾಜ್ಞೆ
Update: 2019-12-28 21:41 IST
ಅಯೋಧ್ಯೆ, ಡಿ. 28: ಅಯೋಧ್ಯೆಯಲ್ಲಿ ನಿಷೇಧಾಜ್ಞೆಯನ್ನು ಫೆಬ್ರವರಿ 25ರ ವರೆಗೆ ವಿಸ್ತರಿಸಲಾಗಿದೆ ಎಂದು ಅಯೋಧ್ಯೆ ಜಿಲ್ಲಾ ದಂಡಾಧಿಕಾರಿ ಅನುಜ್ ಕುಮಾರ್ ಝಾ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ 2014 ಡಿಸೆಂಬರ್ 31ರಂದು ಅಥವಾ ಅದಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿರುವ ಹಿಂದೂ, ಕ್ರಿಶ್ಚಿಯನ್, ಸಿಕ್ಖ್, ಜೈನ್, ಪಾರ್ಸಿ, ಬೌದ್ಧರಿಗೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಉತ್ತರಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಮಧ್ಯೆ ಈ ನಿರ್ಧಾರ ಹೊರಬಿದ್ದಿದೆ. ಈ ನಿಷೇಧಾಜ್ಞೆ ಪ್ರಕಾರ ಅಯೋಧ್ಯೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಲು ಜನರು ಆಡಳಿತದಿಂದ ಪರವಾನಿಗೆ ಪಡೆದುಕೊಳ್ಳಬೇಕು.