ಕೇರಳದಲ್ಲಿ ಬಂಧನ ಕೇಂದ್ರ ಆರಂಭಿಸುವ ಚಿಂತನೆ ಇಲ್ಲ: ಕೇರಳ ಸರಕಾರ

Update: 2019-12-28 16:17 GMT

ತಿರುವನಂತಪುರ, ಡಿ. 28: ಅಕ್ರಮ ವಲಸಿಗರನ್ನು ಇರಿಸಲು ರಾಜ್ಯದಲ್ಲಿ ಬಂಧನ ಕೇಂದ್ರಗಳನ್ನು ಆರಂಭಿಸುವ ಯೋಜನೆ ಇರಲಿಲ್ಲ ಎಂದು ಕೇರಳ ಸರಕಾರ ಶುಕ್ರವಾರ ಹೇಳಿದೆ. ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬಂಧನ ಕೇಂದ್ರಗಳಿಗೆ ಸಂಬಂಧಿಸಿ ಮಾಧ್ಯಮದ ಒಂದು ವಿಭಾಗ ತಪ್ಪು ಪ್ರಚಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ಪ್ರಸಕ್ತ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಂಧನ ಕೇಂದ್ರಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸರಕಾರ 2012ರಿಂದ ಆರಂಭಿಸಿದ ಕೆಲಸಗಳನ್ನು ನಿಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಪ್ರಸಕ್ತ ಸರಕಾರ ಸೂಚಿಸಿದೆ ಎಂದು ಹೇಳಿಕೆ ತಿಳಿಸಿದೆ. ವೀಸಾ ಹಾಗೂ ಪಾಸ್‌ಪೋರ್ಟ್‌ನ ಅವಧಿ ಮುಗಿದ ಹೊರತಾಗಿಯೂ ದೇಶದಲ್ಲಿ ನಿರಂತರ ವಾಸಿಸುತ್ತಿರುವ ಹಾಗೂ ಶಿಕ್ಷೆ ಅನುಭವಿಸಿ ಗಡಿಪಾರಿಗೆ ಕಾಯುತ್ತಿರುವ ವಿದೇಶಿಗರಿಗೆ ಬಂಧನ ಕೇಂದ್ರಗಳನ್ನು ಆರಂಭಿಸುವಂತೆ ಕೇಂದ್ರ ಸರಕಾರ 2012 ಆಗಸ್ಟ್‌ನಲ್ಲಿ ಎಲ್ಲ ರಾಜ್ಯ ಸರಕಾರಗಳ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು ಎಂದು ಮುಖ್ಯಮಂತ್ರಿ ಕಚೇರಿಯ ವಿಸ್ತೃತ ಹೇಳಿಕೆ ತಿಳಿಸಿದೆ.

ಪ್ರಸ್ತಾವ ಸಲ್ಲಿಸುವಂತೆ ಕೇಂದ್ರ ಸರಕಾರದ ಪತ್ರದಲ್ಲಿ ಬಯಸಿತ್ತು. ಈ ಪತ್ರದ ಆಧಾರದಲ್ಲಿ 2015 ನವೆಂಬರ್ 4ರಂದು ಗೃಹ ಸಚಿವಾಲಯ ಸಭೆ ಕರೆದಿತ್ತು. ಈ ಸಭೆಯಲ್ಲಿ ಆಗಿನ ಡಿಜಿಪಿ, ಎಡಿಜಿಪಿ ಬೇಹುಗಾರಿಕೆ, ಐಜಿಪಿ (ಕಾರಾಗೃಹ) ಭಾಗವಹಿಸಿದ್ದರು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News