ಹೊಸದಿಲ್ಲಿಯಲ್ಲಿ ಅತಿ ಕಡಿಮೆ 2.4 ಉಷ್ಣಾಂಶ ದಾಖಲು
Update: 2019-12-28 22:07 IST
ಹೊಸದಿಲ್ಲಿ, ಡಿ. 28: ಉತ್ತರ ಭಾರತದಲ್ಲಿ ಚಳಿಗಾಲ ಪ್ರತಿ ದಿನ ತೀವ್ರಗೊಳ್ಳುತ್ತಿದೆ. ದಿಲ್ಲಿಯಲ್ಲಿ ಉಷ್ಣಾಂಶ ಎಲ್ಲ ದಾಖಲೆಗಳನ್ನು ಮೀರಿದೆ. ಇಲ್ಲಿ ಉಷ್ಣಾಂಶ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ 6.10ಕ್ಕೆ ಅತಿ ಕಡಿಮೆ ಉಷ್ಣಾಂಶ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಪಂಜಾಬ್, ಹರಿಯಾಣ, ಚಂಡಿಗಢ, ದಿಲ್ಲಿ, ಉತ್ತರ ರಾಜಸ್ಥಾನ ಹಾಗೂ ಉತ್ತರಪ್ರದೇಶದಂತಹ ರಾಜ್ಯಗಳ ಹೆಚ್ಚಿನ ಪ್ರದೇಶಗಳು ಇಂದು ತೀವ್ರ ಚಳಿಗೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಪಂಜಾಬ್, ಹರ್ಯಾಣ, ಚಂಡಿಗಢ, ದಿಲ್ಲಿ, ಉತ್ತರಪ್ರದೇಶ, ಉತ್ತರ ರಾಜಸ್ಥಾನದಂತಹ ರಾಜ್ಯಗಳಲ್ಲಿ ದಟ್ಟ ಹಿಮ ಕಂಡು ಬಂತು.