ಅಫಘಾನಿಸ್ತಾನ ಸೇನಾನೆಲೆಗೆ ತಾಲಿಬಾನ್ ದಾಳಿ: 10 ಯೋಧರು ಮೃತ್ಯು

Update: 2019-12-28 16:58 GMT

ಕಾಬೂಲ್, ಡಿ.28: ಅಫಘಾನಿಸ್ತಾನದ ದಕ್ಷಿಣ ಪ್ರಾಂತ್ಯದ ಸೇನಾನೆಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 10 ಯೋಧರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಸಾಂಗಿನ್ ಜಿಲ್ಲೆಯಲ್ಲಿರುವ ಸೇನಾ ನೆಲೆಗೆ ಸುರಂಗ ಕೊರೆದು ಪ್ರವೇಶಿಸಿದ ತಾಲಿಬಾನ್ ಉಗ್ರರು ಸ್ಫೋಟಕ ಬಳಸಿ ನೆಲೆಯನ್ನು ಧ್ವಂಸ ಮಾಡಿದ್ದಾರೆ. ಯೋಧರು ತಿರುಗೇಟು ನೀಡುವ ಮೊದಲೇ ಗುಂಡಿನ ದಾಳಿ ಆರಂಭಿಸಿದ್ದಾರೆ. ಘಟನೆಯಲ್ಲಿ 10 ಯೋಧರು ಮೃತರಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ಅಫಘಾನಿಸ್ತಾನದ 215 ಮೈವಾಂದ್ ಸೇನಾನೆಲೆಯ ವಕ್ತಾರ ನವಾಬ್ ಝದ್ರಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಲಿಬಾನ್‌ನ ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ತಾಲಿಬಾನ್ ಸಂಘಟನೆಯ ವಕ್ತಾರರು ಮಾಧ್ಯಮದವರಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ ಮಂಗಳವಾರ ಉತ್ತರ ಪ್ರಾಂತ್ಯದಲ್ಲಿ ದಾಳಿ ನಡೆಸಿದ್ದ ತಾಲಿಬಾನ್ 7 ಯೋಧರನ್ನು ಹತ್ಯೆ ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News