×
Ad

ಚೀನಾಗೆ ಹಿಂತಿರುಗಿ: ಚೀನಾದ ವ್ಯಾಪಾರಿಗಳಿಗೆ ಹಾಂಕಾಂಗ್ ಪ್ರತಿಭಟನಾಕಾರರ ಆಗ್ರಹ

Update: 2019-12-28 22:36 IST
file photo

ಹಾಂಗ್‌ಕಾಂಗ್, ಡಿ.28: ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಶನಿವಾರ ‘ಹಾಂಕಾಂಗನ್ನು ಸ್ವತಂತ್ರಗೊಳಿಸಿ’ ಎಂಬ ಘೋಷಣೆಯೊಂದಿಗೆ ಶಾಪಿಂಗ್ ಮಾಲ್‌ಗೆ ಜಾಥಾ ತೆರಳಿದ ಪ್ರತಿಭಟನಾಕಾರರ ತಂಡ, ಅಲ್ಲಿದ್ದ ಚೀನಾ ಮೂಲದ ವ್ಯಾಪಾರಿಗಳಿಗೆ ದೇಶ ಬಿಟ್ಟು ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಹಾಂಗ್‌ಕಾಂಗ್‌ನ ಶೆಂಗ್ ಶುಯ್ ನಗರದಲ್ಲಿ ಪ್ರತಿಭಟನಾಕಾರರು ಚೀನಾದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ತಡೆಯೊಡ್ಡಿ ಸರಕಾರದ ಮೇಲೆ ಒತ್ತಡ ಹೆಚ್ಚಿಸುವ ಪ್ರಯತ್ನ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಮ್ಮ ಮೂಲಸ್ಥಾನಕ್ಕೆ ಹಿಂತಿರುಗಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಆದರೆ ಯಾವುದೇ ಹಿಂಸಾಚಾರ ನಡೆಯಲಿಲ್ಲ. ಕೆಲವು ಅಂಗಡಿಗಳು ಅರ್ಧ ಬಾಗಿಲು ಮುಚ್ಚಿದರೂ ವ್ಯಾಪಾರ ಮುಂದುವರಿಸಿದವು ಎಂದು ವರದಿಯಾಗಿದೆ. ಚೀನಾದ ವ್ಯಾಪಾರಿಗಳಿಗೆ ಹಾಂಗ್‌ಕಾಂಗ್ ನೆಚ್ಚಿನ ವ್ಯಾಪಾರಿ ತಾಣವಾಗಿದ್ದು ಇಲ್ಲಿ ಚೀನಾದಿಂದ ಬರುವ ವಸ್ತುಗಳಿಗೆ ತೆರಿಗೆ ವಿಧಿಸುವುದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News