×
Ad

​ಜ.2ರಂದು ಆವಿಷ್ಕಾರ್ ಯೋಗ 3ನೆ ಕೇಂದ್ರ ಉದ್ಘಾಟನೆ, ಉಪನ್ಯಾಸ

Update: 2019-12-28 22:37 IST

ಮಂಗಳೂರು, ಡಿ. 28: ನಗರದ ಉಜ್ಜೋಡಿ ಪಂಪ್‌ವೆಲ್ ಬಳಿ ಯ ಶೀತಲ್ ಶೆಲ್ಟರ್ ನಲ್ಲಿ ಜ.2ರಂದು ಆವಿಷ್ಕಾರ್ ಯೋಗ 3ನೆ ಕೇಂದ್ರ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಖ್ಯಾತ ವಯದ್ಯ ಬಿ.ಎಂ.ಹೆಗ್ಡೆ ಕೇಂದ್ರವನ್ನು ಉದ್ಘಾಟಿಸಿ ಉಪನ್ಯಾಸ ನಿಡಲಿದ್ದಾರೆ. ಇನ್‌ಲ್ಯಾಂಡ್ ಬಿಲ್ಡರ್ ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ,ಯೋಗಾಚಾರ್ಯ ಎಂ.ಎಲ್.ರೇಗೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಆವಿಷ್ಕಾರ್ ಯೋಗ ಕೇಂದ್ರದ ಪ್ರಕಟಣೆ ತಿಳಿಸಿದೆ.

2020ರಲ್ಲಿ ಯೋಗಾಭ್ಯಾಸ ಪರಿಕಲ್ಪನೆಯೊಂದಿಗೆ ಆವಿಷ್ಕಾರ ಯೋಗ ಕೇಂದ್ರದಲ್ಲಿ ನಿತ್ಯ ಯೋಗಾಭ್ಯಾಸ , ದೃಶ್ಯ ಮಾಧ್ಯಮದ ಮೂಲಕ ವೀಡಿಯೊ ಮೂಲಕ ಮಾಹಿತಿ ನೀಡಲಾಗುವುದು. ಮಾಹಿತಿಗಾಗಿ 9845588740,9591130105 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜ. 2ರಂದು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಹಾಗೂ ಶ್ವಾಸ ಕೋಶ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News