×
Ad

ಉಡುಪಿ : ವಿಶೇಷ ಪಿಪಿ(ಪೊಕ್ಸೋ) ಹುದ್ದೆಗೆ ವಿಜಯ ಪೂಜಾರಿ ರಾಜೀನಾಮೆ

Update: 2019-12-28 22:39 IST

ಉಡುಪಿ, ಡಿ.28: ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ(ಪೊಕ್ಸೋ) ವಿಜಯ ವಾಸು ಪೂಜಾರಿ ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂಬಂಧ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶರು, ಮಂಗಳೂರು ವಲಯ ಹಿರಿಯ ವಿಭಾಗದ ಕಾನೂನು ಅಧಿಕಾರಿ ಗಳು ಹಾಗೂ ಉಡುಪಿ ಜಿಲ್ಲಾ ಅಭಿಯೋಜಕರಿಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಇಮೇಲ್ ಹಾಗೂ ರಿಜಿಸ್ಟ್ರಾರ್ ಅಂಚೆ ಮೂಲಕ ಕಳುಹಿಸಿದ್ದಾರೆ.

‘ಪ್ರಸ್ತುತ ವಿದ್ಯಾಮಾನಗಳಿಂದ ಬೇಸತ್ತು ನನ್ನ ವಿಶೇಷ ಸರಕಾರಿ ಅಭಿ ಯೋಜಕನ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿ ದ್ದೇನೆ. ಖುದ್ದಾಗಿ ರಾಜೀ ನಾಮೆ ಸಲ್ಲಿಸಲು ಅಸಾಧ್ಯವಾಗಿರುವುದರಿಂದ ಇಮೇಲ್ ಹಾಗೂ ರಿಜಿಸ್ಟ್ರರ್ ಅಂಚೆ ಮೂಲಕ ಕಳುಹಿಸಿದ್ದೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

2015ರ ಮೇ 22ರಿಂದ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಮಣಿಪಾಲದ ಶಾಲೆಯೊಂದರ ಮೂರು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪೊಕ್ಸೋ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News