ತಲಪಾಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಾರ್ನರ್ ಮೀಟ್
Update: 2019-12-28 23:04 IST
ಬಂಟ್ವಾಳ, ಡಿ. 28: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಮಂಗಳೂರು ಪೊಲೀಸ್ ದೌರ್ಜನ್ಯ ಖಂಡಿಸಿ ತಲಪಾಡಿ ಜಮಾಅತ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ, ಕಾರ್ನರ್ ಮೀಟ್ ಕಾರ್ಯಕ್ರಮ ತಲಪಾಡಿ ಮಸೀದಿ ವಠಾರದಲ್ಲಿ ನಡೆಯಿತು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ ಎಂದು ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಸಾಮಾಜಿಕ ಕಾರ್ಯಕರ್ತ ಮುಸ್ತಾಕ್ ತಲಪಾಡಿ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಹುಲ್ ಹಮೀದ್ ತಲಪಾಡಿ, ಅಶ್ರಫ್ ಬಿ.ಎಂ.ಟಿ., ಅನ್ವರ್ ಕೆ.ಎಚ್., ಶಬೀರ್, ಸವಾಝ್, ಇರ್ಷಾದ್, ಸಲಾಂ, ಕಮರುದ್ದೀನ್, ಅಶ್ಫಾಕ್, ಆಸಿಫ್ ಆರ್.ಕೆ., ಹಾರಿಸ್, ಆರಿಫ್ ಮತ್ತಿತರರಿದ್ದರು.