×
Ad

ಹೆಲ್ಮೆಟ್ ಇಲ್ಲದೆ ಪ್ರಿಯಾಂಕಾ ಸವಾರಿ; ಕಾಂಗ್ರೆಸ್ ಕಾರ್ಯಕರ್ತನಿಗೆ ದಂಡ

Update: 2019-12-29 23:51 IST

ಹೊಸದಿಲ್ಲಿ, ಡಿ.29: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶನಿವಾರ ಇಲ್ಲಿಯ ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಅವರ ನಿವಾಸಕ್ಕೆ ಪ್ರಯಾಣಿಸಿದ್ದ ಸ್ಕೂಟರ್‌ನ ಮಾಲಿಕನಾಗಿರುವ ಪಕ್ಷದ ಕಾರ್ಯಕರ್ತನಿಗೆ ಸಂಚಾರ ಪೊಲೀಸರು 6,100 ರೂ.ಗಳ ದಂಡ ವಿಧಿಸಿದ್ದಾರೆ. ಪ್ರಿಯಾಂಕಾ ಮತ್ತು ಸ್ಕೂಟರ್ ಚಾಲಕ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗೆ ಸಂಬಂಧಿಸಿದಂತೆ ದಾರಾಪುರಿ ಬಂಧನದಲ್ಲಿದ್ದಾರೆ. ಅವರ ಕುಟುಂಬ ಸದಸ್ಯರ ಭೇಟಿಗಾಗಿ ತೆರಳುತ್ತಿದ್ದ ಪ್ರಿಯಾಂಕಾರ ವಾಹನಗಳ ಸಾಲನ್ನು ಪೊಲೀಸರು ತಡೆದಿದ್ದರು. ಈ ವೇಳೆ ಕಾರಿನಿಂದ ಕೆಳಗೆ ಇಳಿದು ಕೊಂಚ ದೂರ ನಡೆದುಕೊಂಡು ಹೋಗಿದ್ದ ಪ್ರಿಯಾಂಕಾ ಬಳಿಕ ಪಕ್ಷದ ಕಾರ್ಯಕರ್ತ ಧೀರಜ್ ಗುಲ್ಜಾರ್ ಎಂಬಾತ ಚಲಾಯಿಸುತ್ತಿದ್ದ ಸ್ಕೂಟರ್ ಹತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದ ಚಿತ್ರಗಳ ಆಧಾರದಲ್ಲಿ ಪೊಲೀಸರು ಈ ದಂಡ ವಿಧಿಸಿದ್ದು,ಸ್ಕೂಟರ್ ಮಾಲಿಕ ರಾಜದೀಪ ಸಿಂಗ್ ಎಂಬಾತ ಈ ದಂಡದ ಹಣವನ್ನು ಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News