×
Ad

ಬಿ.ಸಿ.ರೋಡ್ ನಲ್ಲಿ ಇಂದು ಸಿಎಎ-ಎನ್‌ಆರ್‌ಸಿ ವಿರುದ್ಧ ಬೃಹತ್ ಪ್ರತಿಭಟನೆ

Update: 2019-12-30 10:50 IST
ಸಾಂದರ್ಭಿಕ ಚಿತ್ರ

ಬಿ.ಸಿ.ರೋಡ್: ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ಇಂದು (ಡಿಸೆಂಬರ್ 30) ಮದ್ಯಾಹ್ನ 2-30ಕ್ಕೆ ಬಿ.ಸಿ.ರೋಡ್ ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ನಡೆಯಲಿದೆ. 

ಕಾರ್ಯಕ್ರಮವನ್ನು ಅಶ್ರಫ್ ಫೈಝಿ ಕೊಡಗು ಉದ್ಘಾಟಿಸಲಿದ್ದು, ಸಯ್ಯದ್ ಯಹ್ಯಾ ತಂಙಳ್ ದುಃಹಾ ನೆರವೇರಿಸುವರು. ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಮುಹಮ್ಮದ್ ಶಫಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಪ್ರತಿಭಟನಾ ಸಮಾವೇಶ ವನ್ನುದ್ದೇಶಿಸಿ ಶಶಿಧರ್ ಭಟ್ ಬೆಂಗಳೂರು, ಸುಧೀರ್ ಕುಮಾರ್ ಕೊಪ್ಪ, ಎಮ್.ಬಿ. ಸದಾಶಿವ ಸುಳ್ಯ, ಅನೀಸ್ ಕೌಸರಿ, ಯಾಕೂಬ್ ಸಅದಿ, ಮುಹಮ್ಮದ್ ಕುಂಞ, ಖಲೀಲ್ ತಲಪಾಡಿ, ಯಾಸರ್ ಹಸನ್, ಅತಾವುಲ್ಲಾ ಜೋಕಟ್ಟೆ, ಹನೀಫ್ ಖಾನ್ ಕೊಡಾಜೆ, ಪಿ.ಎ.ರಹೀಂ, ಹಾಗೂ ಅಬೂಬಕ್ಕರ್ ಕೆ.ಎಚ್ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಬೆಂಬಲ
ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜನತಾದಳ, ಎಸ್ಡಿಪಿಐ, ಮುಸ್ಲಿಮ್ ಲೀಗ್ ನ ಸ್ಥಳೀಯ ನಾಯಕರು, ಧಾರ್ಮಿಕ ಸಂಘಟನೆಗಳಾದ
ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಜಮಾಅತೇ ಇಸ್ಲಾಮೀ ಹಿಂದ್, ಸಲಫೀ ಮೂವ್ಮೆಂಟ್, ಇಮಾಮ್ ಕೌನ್ಸಿಲ್, ಕರ್ನಾಟಕ ಮುಸ್ಲಿಮ್ ಜಮಾಅತ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬ್ಯಾರಿ ಫೌಂಡೇಶನ್ ಬಂಟ್ವಾಳ, ಮುಸ್ಲಿಮ್ ಜಮಾಅತ್ ಬಂಟ್ವಾಳ, ಸಿಎಫ್ಐ, ಎಸ್ಐಒ, ಎಸ್.ಟಿ.ಡಿ.ಯು, ಎಂ.ಎಸ್.ಎಫ್, ತಾಲೂಕಿನ ವಿವಿಧ ಜಮಾಅತ್ ಕಮಿಟಿಗಳು, ಸ್ಥಳೀಯ ಧಾರ್ಮಿಕ ಹಾಗೂ ಸಮಾಜಿಕ  ಸಂಘ ಸಂಸ್ಥೆಗಳು ಈ ಪ್ರತಿಭಟನಾ ಸಮಾವೇಶಕ್ಕೆ ಬೆಂಬಲವನ್ನು ಘೋಷಿಸಿದೆ. ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿ ಮುಹಮ್ಮದ್ ಶಫಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News