ಪಿ.ಎ. ಫಾರ್ಮಸಿ ಕಾಲೇಜಿಗೆ ಹಲವು ರ‌್ಯಾಂಕ್ ಗಳು
Update: 2019-12-30 11:27 IST
ಮಂಗಳೂರು, ಡಿ.30: ನಡುಪದವಿನಲ್ಲಿರುವ ಪಿ.ಎ. ಫಾರ್ಮಸಿ ಕಾಲೇಜಿಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ಜನವರಿ 2019ನೇ ಸಾಲಿನಲ್ಲಿ ನಡೆಸಿದ ಬಿ.ಫಾರ್ಮ ಪ್ರಥಮ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಒಟ್ಟು 19 ರ‌್ಯಾಂಕ್ ಗಳು ಲಭಿಸಿ ಅದ್ವಿತೀಯ ಸಾಧನೆ ಮಾಡಿದೆ.
ಫಾರ್ಮಸ್ಯುಟಿಕ್ಸ್ ವಿಷಯದಲ್ಲಿ ನಫೀಸ ಸಹೀದ 7ನೇ ರ‌್ಯಾಂಕ್ ಖತೀಜತ್ ಕುಬ್ರಾ 8ನೇ ರ‌್ಯಾಂಕ್, ಫಾರ್ಮಸ್ಯುಟಿಕಲ್ ಅನಾಲಿಸಿಸ್ ವಿಷಯದಲ್ಲಿ ಮರಿಯಮತ್ ಇಶಾನ 7ನೇ ರ‌್ಯಾಂಕ್ ನಸೀಹ ಫರ್ಝಾನ 10ನೇ ರ‌್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.