×
Ad

ಸಿಎಎ, ಎನ್‌ಆರ್‌ಸಿ ವಿರುದ್ಧ ಅರ್ಚಕರಿಂದ ಪ್ರತಿಭಟನೆ

Update: 2019-12-30 20:01 IST
file photo

ಕೋಲ್ಕತಾ,ಡಿ.30: ಹಿಂದು ಅರ್ಚಕರು ಸೋಮವಾರ ನಗರದ ಮೇಯೊ ರಸ್ತೆಯ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯ ಬಳಿ ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

 ‘ಪಶ್ಚಿಮ ಬಂಗ ಸನಾತನ ಬ್ರಾಹ್ಮಣ ಟ್ರಸ್ಟ್’ನ ಆಶ್ರಯದಲ್ಲಿ ಪ್ರತಿಭಟನೆ ನಡೆಸಿದ ಅರ್ಚಕರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ,  ರಾಜ್ಯದಲ್ಲಿ ಶಾಂತಿಗಾಗಿ ಆಗ್ರಹಿಸಿದರು. ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಹಿಂಸಾತ್ಮಕ ಘಟನೆಗಳಿಗೆ ರಾಜ್ಯವು ಸಾಕ್ಷಿಯಾಗಿತ್ತು.

“ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಪ್ರಯತ್ನಗಳು ನಡೆಯುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸಿಎಎ ಮತ್ತು ಎನ್‌ಆರ್‌ಸಿ ಒಂದು ನಿರ್ದಿಷ್ಟ ಸಮುದಾಯವನ್ನು ಹೊರಗಿಡುವ ಉದ್ದೇಶವನ್ನು ಹೊಂದಿವೆ. ಇದು ಅತ್ಯಂತ ದುರದೃಷ್ಟಕರವಾಗಿದೆ. ಹೀಗೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡರೆ ಒಂದಲ್ಲೊಂದು ದಿನ ಅದು ನಮಗೂ ತೊಂದರೆಯನ್ನು ಮಾಡಲಿದೆ” ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀಧರ ಮಿಶ್ರಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News