×
Ad

ಹೊಳೆಯಲ್ಲಿ ಯುವಕನ ಸಂಶಯಾಸ್ಪದ ಸಾವು: ದೂರು

Update: 2019-12-30 22:06 IST

ಬ್ರಹ್ಮಾವರ, ಡಿ.30: ಯುವಕನೋರ್ವ ಹೊಳೆಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಮದ ಕಮ್ಮರಡಿಯ ಈಶ್ವರ ಆರ್.ಎಂ. ಎಂಬವರ ಮಗ ಅವಿನಾಶ್(20) ಎಂದು ಗುರುತಿಸಲಾಗಿದೆ. ಇವರು ಉಡುಪಿ ಪಿಪಿಸಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ಪದವಿ ಓದುತ್ತಿದ್ದು, ಮಣಿಪಾಲದಲ್ಲಿ ರೂಮ್ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದನು.

ಡಿ. 29ರಂದು ಶ್ರೀಕಾಂತ್ ಎಂಬವರ ಜೊತೆ ಅವಿನಾಶ್ ಬಿದಿರು ಕಡಿಯುತ್ತಿದ್ದು ಮಧ್ಯಾಹ್ನ ಶ್ರೀಕಾಂತ್ ಊಟಕ್ಕೆ ಹೋಗಿ ಬಂದು ನೋಡಿದಾಗ ಅವಿನಾಶ್ ನಾಪತ್ತೆಯಾಗಿದ್ದನು. ಸ್ಥಳೀಯರು ಸೇರಿ ಹುಡುಕಿದಾಗ ಅವಿನಾಶ್ ಪೆಜಮಂಗೂರು ಗ್ರಾಮದ ಗುಂಡಾಲು ಹೊಳೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆದರೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆತ ಮೃತಪಟ್ಟಿರುವುದಾಗಿ ಶ್ರೀಕಾಂತ್ ನೀಡಿರುವ ಹೇಳಿಕೆಯಲ್ಲಿ ಸಂಶಯ ಇದ್ದು, ಅವಿನಾಶ್‌ನನ್ನು ಯಾರಾದರೂ ಸೇರಿ ಹೊಳೆಗೆ ದೂಡಿರಬಹುದು ಎಂದು ಅನಿವಾಶ್ ತಂದೆ ಈಶ್ವರ ಆರ್.ಎಂ. ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News