ಬಾವಿಗೆ ಬಿದ್ದು ಯುವತಿ ಮೃತ್ಯು
Update: 2019-12-30 22:08 IST
ಬೈಂದೂರು, ಡಿ.30: ನೀರು ಸೇದುತ್ತಿದ್ದ ಯುವತಿಯೊಬ್ಬಳು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಡಿ. 29ರಂದು ಬೆಳಗ್ಗೆ ನಾವುಂದ ಗ್ರಾಮದ ಬಾಗಲಾಡಿ ಕುದ್ರುಕೋಡು ಎಂಬಲ್ಲಿ ನಡೆದಿದೆ.
ಮೃತರನ್ನು ಕುದ್ರುಕೋಡು ನಿವಾಸಿ ಬಾಬು ಮೊಗವೀರ ಎಂಬವರ ಮಗಳು ಪ್ರೀತಿ(19) ಎಂದು ಗುರುತಿಲಾಗಿದೆ. ಬಾರ್ಕೂರು ಪ್ರಥಮ ದರ್ಜೆ ಕಾಲೇಜಿ ನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಇವರು ಕ್ರಿಸ್ಮಸ್ ರಜೆಗೆ ಮನೆಗೆ ಬಂದಿದ್ದರು. ಬೆಳಗ್ಗೆ ಬಾವಿಯಿಂದ ನೀರು ತರಲು ಹೋದ ಪ್ರೀತಿ, ನೀರು ಸೇದುವಾಗ ಬಾವಿಯ ರಾಟೆ ಹಗ್ಗ ತುಂಡಾಗಿ ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.