×
Ad

ತೊಕ್ಕೋಟ್ಟು : ಯುನಿವೆಫ್ ನಿಂದ ಪ್ರವಾದಿ ಸಂದೇಶ

Update: 2019-12-30 22:29 IST

ಮಂಗಳೂರು : ಯುನಿವೆಫ್ ಕರ್ನಾಟಕ 2019ರ ನವೆಂಬರ್ 22 ರಿಂದ  2020ರ ಜನವರಿ 24ರ ವರೆಗೆ "ಮಾನವ ಸಂಬಂಧ ಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿ ಯನ್ನು" ಅಭಿಯಾನದ ಅಂಗವಾಗಿ ಉಳ್ಳಾಲ ಶಾಖೆ ವತಿಯಿಂದ ಸಾರ್ವಜನಿಕ ಸಭೆ ತೊಕ್ಕೋಟ್ಟಿನ ಅಂಬೇಡ್ಕರ್ ಮೈದಾನದಲ್ಲಿ ಜರಗಿತು. ಪೊಸಕುರಲ್ ಟಿ.ವಿ. ಚ್ಯಾನೆಲ್ ನ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

"ನಮ್ಮ ಹುಟ್ಟು ನಮ್ಮ ಆಯ್ಕೆಯಲ್ಲ. ಆದರೆ ಧರ್ಮ ನಮ್ಮ ಆಯ್ಕೆ. ನಮ್ಮ ಧರ್ಮದೊಂದಿಗೆ ಇತರ ಧರ್ಮಗಳನ್ನು ಅರಿಯುವ ಸಾತ್ವಿಕ ಮನೋಭಾವ ನಮ್ಮಲ್ಲಿದ್ದರೆ, ಎಲ್ಲಾ ಧರ್ಮಗಳ ಸಾರಗಳು ಒಂದೇ ಎನ್ನುವುದು ಮನವರಿಕೆಯಾಗಿ ನಮ್ಮಲ್ಲಿ ಸಾಮರಸ್ಯ ಮೂಡುತ್ತದೆ. ಪ್ರವಾದಿ ಮುಹಮ್ಮದ್ (ಸ) ರವರು ನೈತಿಕವಾಗಿ ಉನ್ನತರಾಗಿದ್ದ ಕಾರಣ ಇತರರನ್ನು ಸುಧಾರಿಸುವ, ನಾಗರಿಕ ಸಮಾಜ ಕಟ್ಟುವ ಹಾಗೂ ನೈತಿಕವಾಗಿ ಅವರನ್ನು ಉನ್ನತಿಗೇರಿಸುವ ಕೆಲಸದಲ್ಲಿ ಅವರು ನಿರೀಕ್ಷಿತ ಯಶಸ್ಸು ಕಂಡರು" ಎಂದು ಹೇಳಿದರು.

ಕೇಂದ್ರೀಯ ವಿಷಯದ ಮೇಲೆ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಪ್ರವಾದಿ ಮುಹಮ್ಮದ್ (ಸ) ರನ್ನು ತಮ್ಮ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ, ಅತೀ ಹೆಚ್ಚು ಗೌರವಿಸುವ ಮುಸ್ಲಿಮ್ ಸಮುದಾಯ‌ ಅವರನ್ನು ಎಂದೂ ಪೂಜಿಸುವುದಿಲ್ಲ. ಯಾಕೆಂದರೆ ಇಸ್ಲಾಮಿನಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇಲ್ಲ. ಪ್ರವಾದಿ ಮುಹಮ್ಮದ್ (ಸ) ಸೃಷ್ಟಿಕರ್ತನಾದ ಏಕದೇವನನ್ನು ಮಾತ್ರ ಆರಾಧಿಸುವಂತೆ ಬೋಧಿಸಿದರು. ಸರ್ವಧರ್ಮ ಗ್ರಂಥಗಳೂ ಏಕದೇವತ್ವವನ್ನೇ ಪ್ರತಿಪಾದಿಸುತ್ತಿವೆ. ಆದರೆ ಇಸ್ಲಾಮ್ ಮಾತ್ರ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ" ಎಂದು ಹೇಳಿದರು.

ಮಂಗಳೂರು ಶಾಖಾಧ್ಯಕ್ಷ ನೌಫ಼ಲ್ ಹಸನ್ ಕಿರ್ ಅತ್ ಪಠಿಸಿದರು.  ಜಿಲ್ಲಾಧ್ಯಕ್ಷ ಮತ್ತು ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುದ್ರೋಳಿ ಶಾಖಾ ಕಾರ್ಯದರ್ಶಿ ಅರ್ಶಲನ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News