ದುಬೈ: 2020ರ ಬಜೆಟ್‌ನಲ್ಲಿ ದಾಖಲೆಯ ಏರಿಕೆ

Update: 2019-12-30 18:25 GMT

ದುಬೈ, ಡಿ. 30: ದುಬೈಯ ಆರ್ಥಿಕತೆಯನ್ನು ಬಲಪಡಿಸಲು ಹಾಗೂ 2020ರ ಜಾಗತಿಕ ವಸ್ತುಪ್ರದರ್ಶನಕ್ಕೆ ಉತ್ತೇಜನ ನೀಡಲು ದುಬೈ ಸರಕಾರವು ಸರಕಾರಿ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಿದೆ. ಈ ಸಂಬಂಧ ದುಬೈಯ 2020ರ ಬಜೆಟನ್ನು ರವಿವಾರ ಬಿಡುಗಡೆಗೊಳಿಸಲಾಯಿತು.

ಮುಂದಿನ ವರ್ಷದ ಸರಕಾರಿ ವೆಚ್ಚವು 17 ಶೇಕಡದಷ್ಟು ಹೆಚ್ಚಲಿದ್ದು ಒಟ್ಟು ವೆಚ್ಚವು ದಾಖಲೆಯ 6640 ಕೋಟಿ ದಿರ್ಹಮ್ ಆಗಲಿದೆ. 2019ರ ಬಜೆಟ್ 5680 ಕೋಟಿ ದಿರ್ಹಮ್ ಆಗಿತ್ತು ಎಂದು ಡಬ್ಲುಎಎಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಆದರೆ, ಮೂಲಸೌಕರ್ಯಕ್ಕೆ ನೀಡಲಾಗಿರುವ ಹಣ 2020ರಲ್ಲಿ ಕಡಿಮೆಯಾಗಿದೆ. ಇದು ಸತತ ಎರಡನೇ ವರ್ಷವಾಗಿದೆ. ಆರು ತಿಂಗಳ ಕಾಲ ನಡೆಯಲಿರುವ ಜಾಗತಿಕ ವಸ್ತು ಪ್ರದರ್ಶನದ ಸಿದ್ಧತೆಗಾಗಿ ಸರಕಾರ ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News