×
Ad

'ಸಹ್ಯಾದ್ರಿ ಸಂಚಯ'ದಿಂದ ವಿಶಿಷ್ಟವಾಗಿ ಹೊಸ ವರ್ಷಾಚರಣೆ

Update: 2019-12-31 14:14 IST

ಮಂಗಳೂರು, ಡಿ.31: ಹೊಸ ವರ್ಷಾಚರಣೆಯನ್ನು ಪರಿಸರ ಸಂರ್ಷಣೆಗೆ ಬಳಸಿಕೊಳ್ಳಲು ನಿರ್ಧರಿಸಿರುವ ಸಹ್ಯಾದ್ರಿ ಸಂಚಯವು ಮಂಗಳೂರು ನಗರ ರೋಟಾರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ವಿಶಿಷ್ಟವಾಗಿ ಹೊಸ ವರ್ಷವನ್ನು ಸ್ವಾಗತಿಸಲು ನಿರ್ಧರಿಸಿದೆ.

ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೆ ಹೊಸ ವರ್ಷದ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತದೆ. ಸಂಭಾವ್ಯ ಪ್ರಾಕೃತಿಕ ಸಮಸ್ಯೆಗಳ ಬಗ್ಗೆ ಜಾಗೃತಿಗಾಗಿ ಒಂದು ಗಿಡ, ಒಂದು ಮಣ್ಣಿನ ಮಡಕೆ, ಒಂದು ಬಟ್ಟೆ ಚೀಲವನ್ನು ಇವರೆಲ್ಲರಿಗೆ ನೀಡಿ ನೀರಿನ ಬಗ್ಗೆ ಜಾಗೃತಿಗಾಗಿ ಒಂದು ಮಡಕೆ, ತಾಪ ನಿವಾರಣೆ ಮತ್ತು ಅಂತರ್ಜಲ ಕುಸಿತ ನಿವಾರಿಸಲು ಒಂದು ಗಿಡ, ಪ್ಲಾಸ್ಟಿಕ್ ನಿವಾರಣೆಗೆ ಒಂದು ಬಟ್ಟೆಯ ಚೀಲವನ್ನು ‘ಉಡುಗೊರೆ’ಯಾಗಿ ನೀಡಲು ಸಂಘಟಕರು ನಿರ್ಧರಿಸಿದ್ದಾರೆ.

‘‘ನಾವು ಹೊಸ ವರುಷದ ಸಂಭ್ರಮ, ಸಂತಸಕ್ಕಿಂತ 2020ರ ಸಂಕಟದ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ. 2020ರ ಮಾರ್ಚ್, ಎಪ್ರಿಲ್‌ನಲ್ಲಿ ಆಗಲಿರುವ ನೀರಿನ ಭೀಕರ ಬರಗಾಲ ಮತ್ತು ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಆಗಲಿರುವ ಪಶ್ಚಿಮ ಘಟ್ಟದ ಭೂಕುಸಿತ, ಜಲ ಪ್ರವಾಹದ ಮಹಾ ದುರಂತಗಳ ಬಗ್ಗೆಯೂ ಯೋಚಿಸಬೇಕಾಗಿದೆ. ನೇತ್ರಾವತಿ ಬರಿದಾಗಿ ಈಗಲೇ ನೀರಿನ ಸಮಸ್ಯೆ ಆರಂಭವಾಗಿದೆ. 38 ಡಿಗ್ರಿ ತಾಪಮಾನವು ಆಗಿದೆ. ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಿದೆ. ಆದರೆ ಈ ಬಗ್ಗೆ ಮುನ್ನೆಚ್ಚರಿಕೆ, ಜನಜಾಗೃತಿ, ಪೂರ್ವಭಾವಿ ತಯಾರಿ ಜನರಿಂದಲೂ ಜನಪ್ರತಿನಿಧಿಗಳಿಂದಲೂ ಆಗುತ್ತಿಲ್ಲ. ನಾವು ಒಂದು ಪ್ರಾಕೃತಿಕ ದುರಂತ ಆದ ನಂತರ ಅದನ್ನು ಮರೆತು ಇನ್ನೊಂದು ಪ್ರಾಕೃತಿಕ ದುರಂತಕ್ಕೆ ಕಾಯುತ್ತೇವೆ. ಈ ಹಿನ್ನೆಲೆಯಲ್ಲಿ ನಾವು ಜಿಲ್ಲಾಧಿಕಾರಿ, ಪೊಲೀಸ್ ಕಮಿಶನರ್, ಶಾಸಕರು, ಸಂಸದರು ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಲಾಗುವುದು ಮುಂದೆ ಆಗಲಿರುವ ಪ್ರಾಕೃತಿಕ ಸಮಸ್ಯೆಗಳಿಗೆ ಜಾಗೃತಿಗಾಗಿ ಒಂದು ಗಿಡ, ಒಂದು ಮಣ್ಣಿನ ಮಡಕೆ, ಒಂದು ಬಟ್ಟೆ ಚೀಲವನ್ನು ಇವರೆಲ್ಲರಿಗೆ ನೀಡಿ ನೀರಿನ ಬಗ್ಗೆ ಜಾಗೃತಿಗಾಗಿ ಒಂದು ಮಡಕೆ, ತಾಪ ನಿವಾರಣೆ ಮತ್ತು ಅಂತರ್ಜಲ ಕುಸಿತ ನಿವಾರಿಸಲು ಒಂದು ಗಿಡ, ಪ್ಲಾಸ್ಟಿಕ್ ನಿವಾರಣೆಗೆ ಒಂದು ಬಟ್ಟೆ ಚೀಲವನ್ನು ಉಡುಗೊರೆಯಾಗಿ ನೀಡಲಾಗುವುದು. ಜನಪ್ರತಿನಿಧಿಗಳು, ಜಿಲ್ಲಾಡಳಿತ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಭವಿಷ್ಯದ ಭದ್ರತೆಯನ್ನು ಕಾಪಾಡಬೇಕೆಂದು ಇದರ ಪ್ರಮುಖ ಉದ್ದೇಶ’’ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News