×
Ad

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಚಿತ್ರಕಲೆ -ಪ್ರಬಂಧ ಸ್ಪರ್ಧೆ

Update: 2019-12-31 19:56 IST

ಉಡುಪಿ, ಡಿ.31: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಜ.25ರಂದು ಅಪರಾಹ್ನ 3ಗಂಟೆಯಿಂದ 4ಗಂಟೆಯವರೆಗೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಏರ್ಪಡಿಸ ಲಾಗಿದೆ.

‘ನನ್ನ ಹೂ ತೋಟ ಅಥವಾ ನನ್ನ ಪರಿಸರ’ ಎಂಬ ವಿಷಯದ ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ 5,6,7ನೆ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸ ಲಾಗಿದೆ. ಡ್ರಾಯಿಂಗ್ ಶೀಟ್ ಸ್ಥಳದಲ್ಲೇ ಕೊಡಲಾಗುವುದು. ಉಳಿದ ಸಾಮಾಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.

ಜೀವನದಲ್ಲಿ ಶಿಸ್ತು ವಿಷಯದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳು ಅಪರಾಹ್ನ 2.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು. ಭಾಗವಹಿಸುವ ವಿದ್ಯಾರ್ಥಿಗಳ ಹೆಸರು ಹಾಗೂ ಫೋನ್ ನಂಬರ್, ಶಾಲೆಯ ಮುಖ್ಯೋಪಾಧ್ಯಾಯರು ದೃಢೀಕರಿಸಿ ಜ.18ರೊಳಗೆ ವಿಳಾಸ ಡಾ.ಜೆರಾಲ್ಡ್ ಪಿಂಟೋ, ದಿವ್ಯಾ ದೀಪಾ, ಸಂತೆಕಟ್ಟೆ, ಉಡುಪಿ- 576105 ಅಥವಾ ವಾಟ್ಸಾಪ್ ನಂಬರ್- 94484 80248 ಅಥವಾ ಇಮೇಲ್-gerrynid@gmail.comಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News