×
Ad

ಮಂಗಳೂರು ಮೂಲದ ಸಾಹಿಲ್ ಶೆಟ್ಟಿ ಮಿ.ಟೀನ್ ಇಂಡಿಯಾ

Update: 2019-12-31 21:41 IST

ಮಂಗಳೂರು, ಡಿ.31: ಹೊಸದಿಲ್ಲಿಯ ಪಾಲ್ಮ್ ಗ್ರೀನ್ ಹೋಟೆಲ್ ಆ್ಯಂಡ್ ರೆಸಾರ್ಟ್‌ನಲ್ಲಿ ಇತ್ತೀಚೆಗೆ ಜರಗಿದ ಮಿ. ಟೀನ್ ಇಂಡಿಯಾ-2019 ಸ್ಪರ್ಧೆಯಲ್ಲಿ ಮಂಗಳೂರು ಮೂಲದ ಸಾಹಿಲ್ ಶೆಟ್ಟಿ ವಿಜೇತರಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 105 ಮಂದಿಯನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿರುವ ಸಾಹಿಲ್ ಶೆಟ್ಟಿ ಕತರ್‌ನಲ್ಲಿ ನೆಲೆಸಿರುವ ಅತ್ರಬೈಲ್ ಸುಧಾಕರ ಶೆಟ್ಟಿ ಮತ್ತು ಪ್ರಾರ್ಥನಾ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಇತ್ತೀಚೆಗೆ ಪೂನಾದಲ್ಲಿ ಜರಗಿದ್ದ ಟಾಪ್ ಮಾಡೆಲ್ ಸ್ಪರ್ಧೆಯನ್ನೂ ಅವರು ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News