×
Ad

ಜ. 5: “ಲರ್ನ್ ದಿ ಕುರ್ ಆನ್” ಪರೀಕ್ಷೆ

Update: 2019-12-31 22:04 IST

ಮಂಗಳೂರು :  ಕುರ್ ಆನ್ ನ್ನು ಅರಿಯಬೇಕು ಎಂಬ ಉದ್ದೇಶದಿಂದ ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಮತ್ತು ಅಂಗ ಸಂಸ್ಥೆಗಳಾದ ಸಲಫಿ ಗರ್ಲ್ಸ್ ಮೂವ್‍ಮೆಂಟ್, ಸಲಫಿ ಎಜುಕೇಶನ್ ಬೋರ್ಡ್, ಸಲಫಿ ಯೂತ್ ವಿಂಗ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಎಮ್.ಜಿ.ಎಮ್ ರಿಯಾದ್ “ಲರ್ನ್ ದಿ ಕುರ್ ಆನ್” (ಕುರ್ ಆನ್ ಕಲಿಯಿರಿ) ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. 

15 ವರ್ಷಗಳ ಸುದೀರ್ಘ ಯೋಜನೆಯಲ್ಲಿ ಈಗಾಗಲೇ 6 ಹಂತದ ಪರೀಕ್ಷೆಗಳು ಮುಗಿದಿವೆ. 6 ತಿಂಗಳಿಗೊಮ್ಮೆ ನಡೆಯುವ ಈ ಪರೀಕ್ಷೆಗಾಗಿ ಆಯ್ದ ಒಂದು ಕಾಂಡದ ಅರ್ಥ, ಶಬ್ದಾರ್ಥ ಮತ್ತು ವ್ಯಾಖ್ಯಾನ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಯೋಜನೆಯ 7 ನೇ ಹಂತದ ಪರೀಕ್ಷೆಯು ಜ. 5 ರಂದು 8 ಕೇಂದ್ರಗಳಲ್ಲಿ (ಉಳ್ಳಾಲ, ಕಂಕನಾಡಿ, ತಲಪಾಡಿ, ಕುದ್ರೋಳಿ, ಚೊಕ್ಕಬೆಟ್ಟು, ಉಪ್ಪಿನಂಗಡಿ, ಫರಂಗಿಪೇಟೆ ಮತ್ತು ಮುಲ್ಕಿ) ನಡೆಯಲಿದೆ.

ಈ ಪರೀಕ್ಷೆ ಬರೆಯಲು ಪುರುಷರು, ಮಹಿಳೆಯರು ಮತ್ತು 4 ನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಲಾಗುವುದು.

ಜ.5 ರಂದು ಪರೀಕ್ಷೆ ಮುಗಿದ ತಕ್ಷಣ 8 ನೇ ಹಂತದ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. 8 ನೇ ಹಂತದ ಪರೀಕ್ಷೆಯು ಜೂ. 28 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಪ್ರಧಾನ ಕಾರ್ಯದರ್ಶಿ ಕೆ ಅಬ್ದುಲ್ ರಹಿಮಾನ್ ಉಪ್ಪಿನಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News