ಆಧಾರ್-ಪಾನ್ ಲಿಂಕಿಂಗ್: ಅಂತಿಮ ಗಡುವು ಮಾರ್ಚ್‌ಗೆ ವಿಸ್ತರಣೆ

Update: 2019-12-31 16:34 GMT

ಹೊಸದಿಲ್ಲಿ, ಡಿ.31: ಆಧಾರ್ ಕಾರ್ಡ್‌ ನೊಂದಿಗೆ ಪಾನ್ ಕಾರ್ಡ್ ಜೋಡಿಸುವ ಅಂತಿಮ ಗಡುವನ್ನು 2020ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

 1961ರ ಆದಾಯತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಉಪಸೆಕ್ಷನ್ 2ರಡಿ ಸೂಚಿಸಿದ್ದ , ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಜೋಡಣೆಯ ಅಂತಿಮ ಗಡುವನ್ನು ಡಿಸೆಂಬರ್ 31ರಿಂದ 2020ರ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ . ಆಧಾರ್‌ನೊಂದಿಗೆ ಜೋಡಿಸದ ಪಾನ್ ಕಾರ್ಡ್ ಮಾರ್ಚ್ 31ರ ಬಳಿಕ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಟ್ವಿಟರ್‌ನಲ್ಲಿ ತಿಳಿಸಲಾಗಿದೆ.

ವಿದೇಶದಲ್ಲಿ ನೆಲೆಸಿರುವ ಭಾರತೀಯರೂ ಡಿಸೆಂಬರ್ 31ರೊಳಗೆ ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರಕಾರ ಎರಡು ದಿನದ ಹಿಂದೆ ಸಾರ್ವಜನಿಕ ನೋಟಿಸ್‌ನಲ್ಲಿ ತಿಳಿಸಿತ್ತು. ಎನ್‌ಆರ್‌ಐ(ಅನಿವಾಸಿ ಭಾರತೀಯರು)ಗಳು ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹೊಂದಿರುವ ಅಗತ್ಯವಿಲ್ಲ. ಒಂದು ವೇಳೆ ಕಾರ್ಡ್ ‌ಗಳನ್ನು ಹೊಂದಿದ್ದರೆ ಅದನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದೂ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News