ಭಾರತದಲ್ಲಿ 5ಜಿ ಪರೀಕ್ಷೆ: ಹುವೈಗೆ ಕೇಂದ್ರ ಸರಕಾರ ಅನುಮತಿ
Update: 2019-12-31 23:39 IST
ಹೊಸದಿಲ್ಲಿ, ಡಿ. 31: ಚೀನಾದ ಪ್ರಮುಖ ಮೊಬೈಲ್ ಕಂಪೆನಿ ಹುವೈಗೆ ಭಾರತದಲ್ಲಿ 5ಜಿ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಮುಂದಿನ ತಿಂಗಳಿಂದ ಈ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಹುವೈ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೇ ಚೆನ್, ಹುವೈ ನಂಬಿಕೆ ಬಗ್ಗೆ ಭಾರತ ಸರಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಭಾರತದ ಟೆಲಿಕಾಂ ಉದ್ಯಮವನ್ನು ಪುನರುಜ್ಜೀವನಗೊಳಿಸಲು ತಂತ್ರಜ್ಞಾನದ ಆವಿಷ್ಕಾರ ಹಾಗೂ ಅತ್ಯುಚ್ಚ ಗುಣಮಟ್ಟದ ನೆಟ್‌ವರ್ಕ್ ಅತಿ ಪ್ರಮುಖ ಅಂಶ ಎಂದು ನಾವು ದೃಢವಾಗಿ ನಂಬಿದ್ದೇವೆ ಎಂದಿದ್ದಾರೆ. ‘‘ಮೋದಿ ಸರಕಾರದ ಅಡಿಯಲ್ಲಿ ಭಾರತದಲ್ಲಿ 5ಜಿ ಆರಂಭಿಸುವ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ’’ ಎಂದು ಅವರು ಹೇಳಿದರು.