ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್: ಜ.3ರಂದು ಸುರತ್ಕಲ್‌ನಲ್ಲಿ ನೂತನ ಮಳಿಗೆ ಆರಂಭ

Update: 2020-01-01 14:14 GMT

ಮಂಗಳೂರು, ಜ.1: ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಸ್ವರ್ಣಾಭರಣಗಳ ಸಂಸ್ಥೆ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ 11ನೇ ಶೋರೂಂ ಸುರತ್ಕಲ್‌ನಲ್ಲಿ ಜನವರಿ 3ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸುರತ್ಕಲ್ ಮನೋಹರ್ ಸೆಂಟರ್‌ನ ಎಚ್‌ಎನ್‌ಜಿಸಿ ಐಕಾನ್ ಸಿಟಿಯ ನೆಲ ಮಹಡಿಯಲ್ಲಿ ಜನವರಿ 3ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೂತನ ಶೋರೂಂ ಉದ್ಘಾಟಿಸಲಿದ್ದಾರೆ. ವಜ್ರಾಭರಣಗಳ ಶೋರೂಂ ಅನ್ನು ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಗಳು, ಅನ್‌ಕಟ್ ಡೈಮಂಡ್ ವಿಭಾಗವನ್ನು ಮೌಲಾನಾ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಬ್ರೈಡಲ್ ಗೋಲ್ಡ್ ವಿಭಾಗವನ್ನು ರೆಫಾ ಪೌಲ್ ಪಿಂಟೋ, ಲೈಟ್‌ವೈಟ್ ವಿಭಾಗವನ್ನು ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, ಡೈಲಿವೇರ್ ವಿಭಾಗವನ್ನು ಮಾಜಿ ಶಾಸಕ ಮೊಯ್ದಿನ್ ಬಾವಾ, ವಾಚ್‌ಗಳ ವಿಭಾಗವನ್ನು ಮಹಾನಗರಪಾಲಿಕೆ ಕಾರ್ಪೊರೇಟರ್ ನಾರಾಯಣ ಆರ್ ಕೋಟ್ಯಾನ್, ಬೆಳ್ಳಿ ವಿಭಾಗವನ್ನು ಬಿಎಂ ಮುಮ್ತಾಝ್ ಅಲಿ, ಮಾಸಿಕ ಯೋಜನೆ ವಿಭಾಗವನ್ನು ಪಿ ಇಸ್ಮಾಯಿಲ್ ಅಹ್ಮದ್ ಉದ್ಘಾಟಿಸಲಿದ್ದಾರೆ.

ಆರಂಭೋತ್ಸವದ ಕೊಡುಗೆಯಾಗಿ ಗೋಲ್ಡ್ ಮೇಕಿಂಗ್ ಶುಲ್ಕದಲ್ಲಿ ಪ್ರತೀಗ್ರಾಂ ಮೇಲೆ 150 ರೂ. ರಿಯಾಯಿತಿ, 20,000 ರೂ.ಗಿಂತ ಹೆಚ್ಚಿನ ಖರೀದಿ ಮಾಡುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ, ಡೈಮಂಡ್ ಕ್ಯಾರಟ್ ಬೆಲೆಯ ಮೇಲೆ 7000 ರೂ. ರಿಯಾಯಿತಿ ಸಹಿತ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಲಾಗಿದೆ.ಇದರ ಜೊತೆಗೆ ದೈನಂದಿನ ಲಕ್ಕೀ ಡ್ರಾ, ಮಾಸಿಕ ಲಕ್ಕೀ ಡ್ರಾ ಯೋಜನೆಗಳಿವೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಟಿಎಂ ಅಬ್ದುಲ್ ರವೂಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News