ಸುಜೀರ್-ಮಲ್ಲಿ ಹೈಮಾಸ್ಕ್ ದೀಪ ಉದ್ಘಾಟನೆ
Update: 2020-01-02 14:31 IST
ಬಂಟ್ವಾಳ, ಜ.2: ಪುದು ಗ್ರಾಮ ಪಂಚಾಯತ್ ಹಾಗು ಶಾಸಕರ ಅನುದಾನದಿಂದ ಸುಜೀರ್-ಮಲ್ಲಿ ಹದ್ರೋಸಿಯಾ ಜುಮಾ ಮಸೀದಿ ವಠಾರದಲ್ಲಿ ಹೈಮಾಸ್ಕ್ ದೀಪವನ್ನು ಉದ್ಘಾಟಿಸಲಾಯಿತು.
ಇಲ್ಲಿನ ಮಸೀದಿ ಖತೀಬ್ ರಿಯಾಝ್ ದಾರಿಮಿ ವಗ್ಗ ದುಆ ನೆರವೇರಿಸಿದರು.
ಈ ಸಂದರ್ದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಗ್ರಾಪಂ ಸದಸ್ಯ ಇಕ್ಬಾಲ್ ಸುಜೀರ್, ಎಫ್. ಮೋನು ಫರಂಗಿಪೇಟೆ, ಹಾಜಿ ಫಿರೋಝ್, ನಝೀರ್, ಮಜೀದ್ ಪೇರಿಮಾರ್, ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಸಲಾಂ ಮಲ್ಲಿ, ಕೆ.ಎಂ.ಅಶ್ರಫ್ ಮಲ್ಲಿ, ಮಸೀದಿಯ ಕಾರ್ಯದರ್ಶಿ ಅಶ್ರಫ್, ಸಾದಿಕ್ ಮಲ್ಲಿ ಉಪಸ್ಥಿತರಿದ್ದರು.