ಪೂಜ್ಯ ಶಿವಕುಮಾರ ಶ್ರೀಗಳ ಭೌತಿಕ ಅನುಪಸ್ಥಿತಿ ಕಾಡುತ್ತಿದೆ: ಮೋದಿ

Update: 2020-01-02 09:51 GMT

ತುಮಕೂರು, ಜ.2: ತುಮಕೂರಿಗೆ ಆಗಮಿಸಲು ನನಗೆ ಸಂತಸವಾಗಿದೆ. ಕೆಲವು ವರ್ಷಗಳ ಬಳಿಕ ಇಲ್ಲಿಗೆ ಆಗಮಿಸುವ ಅವಕಾಶ ಸಿಕ್ಕಿದೆ. ಇಲ್ಲಿ  ಪೂಜ್ಯ ಶ್ರೀಗಳ ಭೌತಿಕ ಅನುಪಸ್ಥಿತಿ  ಕಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. 

ತುಮಕೂರಿನ ಸಿದ್ಧಲಿಂಗಾ ಮಠದಲ್ಲಿ ಶಿವಕುಮಮಾರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ  ಶಿಲಾನ್ಯಾಸ ನೆರವೇರಿಸಿ ಮಾತನಾಡಿದ  ಅವರು "ಪೂಜ್ಯ ಶ್ರೀಗಳ  ವಸ್ತು ಸಂಗ್ರಹಾಲಯಕ್ಕೆ ಶಿಲಾನ್ಯಾಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ" ಎಂದರು.

ಪೂಜ್ಯ ಶಿವಕುಮಾರ ಶ್ರೀಗಳ ಪ್ರೇರಣಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನಾವು ಕೆಲವು ದಿನಗಳ ಹಿಂದೆ  ಕರ್ನಾಟಕದ ಇನ್ನೊಬ್ಬರು ಶ್ರೀಗಳಾದ ಪೇಜಾವರ ಶ್ರೀಗಳನ್ನು ನಾವು  ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಶೂನ್ಯ ಆವರಿಸಿದೆ  ಎಂದು ಹೇಳಿದರು.

ದೇಶದಲ್ಲಿ ದೊಡ್ಡ ಬದಲಾವಣೆಗೆ ಜನರು ಆಶೀರ್ವಾದ ನೀಡಿದ್ದಾರೆ. ಜಮ್ಮು -ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ಧು, ರಾಮಮಂದಿರ ನಿರ್ಮಿಸಲು ಸೂಕ್ತ ವಾತಾವರಣ ನಿರ್ಮಾಣವಾಗಿದೆ, ದಬ್ಬಾಳಿಕೆಗೆ ಗುರಿಯಾದವರ ರಕ್ಷಣೆಗೆ ಕಾನೂನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ನಮ್ಮ‌ ಸರಕಾರ  ಜನರಿಗಾಗಿ ಕೆಲಸ ಮಾಡುತ್ತಿದೆ. ಜನರ ಜೀವನ ಸರಳವಾಗಬೇಕು.  ಅವರಿಗೆ  ಸರಿಯಾದ ಮನೆ, ಗ್ಯಾಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ  ನೀಡುವ  ನಿಟ್ಟಿ‌ನಲ್ಲಿ  ಕೆಲಸ ಮಾಡುತ್ತದೆ  ಎಂದು ಹೇಳಿದರು.

ಕರ್ತವ್ಯಕ್ಕೆ ಮಹತ್ವ, ಪ್ರಕೃತಿ  ಮತ್ತು ನೀರಿನ ರಕ್ಷಣೆಗೆ  ಆದ್ಯತೆ  ನೀಡುವಂತೆ  ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News