ಮಂಗಳೂರು ವಿವಿಗೆ ಬೆಳ್ಳಿ: ಮಹಿಳೆಯರ ಹಾಕಿ ತಂಡ ಅಖಿಲ ಭಾರತ ಮಟ್ಟಕ್ಕೆ ತೇರ್ಗಡೆ

Update: 2020-01-02 11:22 GMT

ಕೊಣಾಜೆ: ಡಿ.28ರಿಂದ 30ರವರಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ತಂಡ ಭಾಗವಹಿಸಿ ಎರಡನೇ ಸ್ಥಾವನನ್ನು ಪಡೆದುಕೊಂಡಿದೆ. 

ಮೊದಲನೇ ಲೀಗ್ ಉತ್ಕಾಲ್ ವಿಶ್ವವಿದ್ಯಾಲಯದ ಎದುರು 15-9 ಇನ್ನಿಂಗ್ಸ್, ಎರಡನೇ ಲೀಗ್ ಲವ್ಲಿ ಪ್ರೊಫೆಷನಲ್ ವಿವಿ ಎದುರು 16-9 ಇನ್ನಿಂಗ್ಸ್, ಮೂರನೇ ಲೀಗ್ ಪುಣೆ ವಿಶ್ವವಿದ್ಯಾನಿಲಯದ ವಿರುದ್ಧ 21-15, ಕ್ವಾರ್ಟರ್ ಫನಲ್‍ನಲ್ಲಿ ಮುಂಬೈ ವಿವಿ ಎದುರು 10-7, ಸೆಮಿಫನಲ್‍ನಲ್ಲಿ ಶಿವಾಜಿ ವಿಶ್ವವಿದ್ಯಾನಿಲಯದ ಎದುರು 12-13 ಅಂಕ ಗಳಿಸಿ ಫೈನಲ್‍ನಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಎದುರು 16-13 ಅಂಕಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ತಂಡದ ತರಬೇತುದಾರರಾಗಿ ತಂಡದೊಂದಿಗೆ ಪ್ರದೀಪ್ ಎಸ್. ಹಾಗೂ ವ್ಯವಸ್ಥಾಪಕರಾಗಿ ಹರಿಪ್ರಸಾದ್ ಆಳ್ವ ಇವರು ತೆರಳಿರುತ್ತಾರೆ.
ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು: 1.ಹೃತಿಕ್, 2. ಮನು ವಿ. 3. ಶಿವಣ್ಣ ಎಸ್. 4. ಮಹೇಶ ಪಿ. 5. ಧೀರಜ್ 6. ಮರಿಯಪ್ಪ 7. ವಿಜಯಪಾಂಡೆ ಎಸ್.ಆರ್. 8. ಆಕಾಶ್ ಎಸ್.  9.  ಕೆ.ಪಿ. ತರಂಗ  10. ಜಯನಂದ ವಿ.ಎಸ್. 11. ಕೃಷ್ಣಪ್ರಸಾದ್ ಕಶ್ಯಪ್ ಎನ್., 12. ಹಂಸರಾಜ್ ಡಿ.ಎಮ್. 

ಡಿ.28ರಿಂದ 31ರವರೆಗೆ ತಮಿಳುನಾಡು ಫಿಸಿಕಲ್ ಎಡುಕೇಶನ್ ಮತ್ತು ಸ್ಪೋರ್ಟ್ಸ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ಭಾಗವಹಿಸಿ ಜಯಶಾಲಿಯಾಗಿರುತ್ತದೆ.  ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮದ್ರಾಸ್ ವಿ.ವಿ. ಎದುರು 1-0 ಗೋಲು ಅಂತರಗಳಿಂದ ಜಯಿಸಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ.

ತಂಡದ ತರಬೇತುದಾರರಾಗಿ ತಂಡದೊಂದಿಗೆ  ನಾಚಪ್ಪರವರು  ಹಾಗೂ ವ್ಯವಸ್ಥಾಪಕರಾಗಿ ಸಾಯಿರಬಾನು ಇವರು ತೆರಳಿರುತ್ತಾರೆ.
ತಂಡದಲ್ಲಿ 1. ಕುಮುದ ಸಿ.ಆರ್. 2. ಪ್ರಿಯದರ್ಶಿನಿ  3. ಚೆಲುವಾಂಬ ಆರ್. 4. ನಿವೇದಿತ ಎನ್. 5. ದೀಪ್ತಿ ಕೆ.ಎ.  6. ಪವಿತ್ರ ಪಿ.ಎ.  7.  ಸಂಗೀತ ಸಿ.ಜೆ. 8. ಕೀರ್ತನ ಎಮ್.ಎಸ್.  09.  ಮಿಲನಾ ಕೆ.ಪಿ. 10. ಆಗ್ನೇಸ್ ಜೆ.  11. ಪಾರ್ವತಿ ಪಿ.ಎ. 12. ಲಿಖಿತ ಎಸ್. ಪಿ.    
13. ಲೀಲಾವತಿ ಎಮ್.ಜೆ.  14. ಸುಶ್ಮಿತ ಆರ್.  15. ವಿದ್ಯಾ ಕೆ.ಎಸ್.  16. ಪದ್ಮ ಪ್ರಿಯ  17. ನೀತು ಕೆ.ಎಸ್. 18. ಪಾರ್ವತಿ ಎಮ್. ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News