×
Ad

ಹಲ್ಲೆ ಆರೋಪ: ದೂರು ದಾಖಲು

Update: 2020-01-02 17:53 IST

ಬಂಟ್ವಾಳ, ಜ. 2: ತಲಪಾಡಿ ಸಮೀಪದ ತಾಳಿಪಡ್ಪು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿರುವ ವೇಳೆ ಆಟಗಾರನೋರ್ವನಿಗೆ ಇಬ್ಬರು ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಯುವಕರ ತಂಡ ಕ್ರಿಕೆಟ್ ಆಡುತ್ತಿದ್ದ ವೇಳೆ ಬೌಲರ್ ಇಮ್ರಾನ್ ರ ಎಸೆತವನ್ನು ಬಾಟ್ಸ್  ಮ್ಯಾನ್ ಮುಹಮ್ಮದ್ ಇಕ್ಬಾಲ್ ಪ್ರಶ್ನಿಸಿದರು ಎಂಬ ಕಾರಣಕ್ಕೆ ಇಮ್ರಾನ್ ಹಾಗೂ ಸೈಯದ್ ಅಶ್ರಫ್ ಸೇರಿಕೊಂಡು ಹಲ್ಲೆ ನಡೆಸಿದ್ದರಲ್ಲದೆ, ಜೀವ ಬೆದರಿಕೆವೊಡ್ಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಲ್ಲಿ ಮುಹಮ್ಮದ್ ಇಕ್ಬಾಲ್ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News