ಬೋಳೂರಿನಲ್ಲಿ ಮತ್ಸಗಂಧಿ ಬಾಲವನ ಉದ್ಘಾಟನೆ
ಬೋಳೂರು,ಜ.2: ಬೋಳೂರಿನಲ್ಲಿ ಬೋಳೂರು ಮೊಗವೀರ ಮಹಾಸಭಾದವರು ನೂತನವಾಗಿ ನಿರ್ಮಿಸಿದ ಮತ್ಸಗಂಧಿ ಬಾಲವನ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.
ಶಾಸಕರಾದ ವೇದವ್ಯಾಸ ಕಾಮತ್ ಉದ್ಘಾಟಿಸಿ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಂಗಳೂರಿನ ಬೋಳೂರು ಫೆರಿ ಪ್ರದೇಶವನ್ನು ಮೊಗವೀರ ಮಹಾಸಭಾವು ಮುತುವರ್ಜಿಯಿಂದ ಇತರರಿಗೆ ಮಾದರಿ ಆಗುವಂತೆ ಅಭಿವದ್ಧಿಪಡಿಸಿದೆ. ಸರಕಾರದೊಂದಿಗೆ ಸಾರ್ವಜನಿಕರು ,ಸಂಸ್ಥೆಗಳು ಕೈ ಜೋಡಿಸಿದಾಗ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಬೋಳೂರು ಮೊಗವೀರ ಮಹಾಸಭಾವು ಸಮುದಾಯಕ್ಕೆ ಮಾದರಿ ಕಾರ್ಯಕ್ರಮ ಅನುಷ್ಠಾನಿಸುತ್ತಿದೆ ಎಂದು ಶ್ಲಾಸಿದರು.
ಸಮಾಮಾರಂಭದ ಅಧ್ಯಕ್ಷತೆಯನ್ನು ಮೊಗವೀರ ಮಹಿಳಾ ಮಹಾಜನ ಸಂಘದ ಮಾಜಿ ಅಧ್ಯಕ್ಷೆಯಾದ ಸರಳಾ ಕಾಂಚನ್‌ರವರು ವಹಿಸಿದ್ದರು. ವೇದಿಕೆಯಲ್ಲಿ ಬೋಳೂರು ವಾರ್ಡಿನ ನೂತನ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ತಣ್ಣೀರುಬಾವಿ ಪಣಂಬೂರು ಕಾರ್ಪೋರೇಟರ್ ಸವಿತಾ, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ, ನಮ್ಮ ಕುಡ್ಲ ತುಳು ಚಾನೆಲ್ ನಿರ್ದೇಶಕ ಹರೀಶ್ ಕರ್ಕೇರ, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷರಾದ ಮೋಹನ್ ಬೆಂಗ್ರೆ, ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷರಾದ ರಾಜಶೇಖರ ಕರ್ಕೇರ, ಉಪಾಧ್ಯಕ್ಷ ದೇವದಾಸ್ ಬೋಳೂರು, ಬೋಳೂರು ಮಹಿಳಾ ಮಂಡಲದ ಅಧ್ಯಕ್ಷೆಯಾದ ಸವಿತಾ ರಘು, ಬೋಳೂರು ಗ್ರಾಮದ ಗುರಿಕಾರರಾದ ದೇವಾನಂದ ಗುರಿಕಾರ, ಜಯರಾಜ್ ಗುರಿಕಾರ, ತಾರನಾಥ ಗುರಿಕಾರ, ಸೋಮಶೇಖರ ಗುರಿಕಾರರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪರಿಸರ ಪ್ರೇಮಿಗಳಾದ ಕುಲ್ಯಾಡಿಕಾರ್ಸ್ ಮತ್ತು ಜಗದೀಶ್ ಪೈ ರವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕಾರ್ಯದರ್ಶಿ ಸುಭಾಸ್ ಕುಂದರ್ ನಿರೂಪಿಸಿದರು. ಆರ್.ಪಿ.ಬೋಳೂರು ಮತ್ತು ಮಧುಕುಮಾರ್ ಸನ್ಮಾನಿತರ ಪರಿಚಯ ನೀಡಿದರು. ಯಶವಂತ ಮೆಂಡನ್ ವಂದಿಸಿದರು.
ಮನೋರಂಜನಾ ಕಾರ್ಯಕ್ರಮವಾಗಿ ಪಲ್ಗುಣಿ ನದಿ ಕಿನಾರೆಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ‘4 ಗೋಡೆದ ನಡುಟು’ ಎಂಬ ನಾಟಕ ಪ್ರದರ್ಶಿಸಲಾಯಿತು.