ಬೆಳ್ತಂಗಡಿ:ಶುಕ್ರವಾರದಿಂದ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಜಮಲಾಬಾದ್ ಉರೂಸ್

Update: 2020-01-02 14:48 GMT

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಜಮಲಾಬಾದ್ ಇಲ್ಲಿನ ಉರೂಸ್ ಶುಕ್ರವಾರದಿಂದ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ.  

ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅವರ ಸ್ಮಾರಕ ಜಮಲಾಬಾದ್ ಕೋಟೆಯ ಕೆಳ ಭಾಗದಲ್ಲಿ ಪುರಾತನ ಕಾಲದಿಂದಲೂ ಹಯಾತುಲ್ ಅವುಲಿಯಾರವರ ಹೆಸರಿನಲ್ಲಿ ವರ್ಷಂಪ್ರತಿ ಉರೂಸ್ ಕಾರ್ಯಕ್ರಮವನ್ನು ನೆರವೇರಿಸುತ್ತಾ ಬರಲಾಗುತ್ತಿದೆ. ಇಲ್ಲಿ ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿಯೇ ಕಟ್ಟಲಾಗಿರುವ ಮಸೀದಿಯೂ ಇದೆ.  

ಜನವರಿ 3 ರಂದು ಶುಕ್ರವಾರದಂದು ಮಗ್ರಿಬ್ ನಮಾಝ್ ನಂತರ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಸಯ್ಯದ್ ಅಸ್ಗರ್ ಬಿನ್ ಸಾಹೇಬ್ ತಂಙಳ್. ಸೈಯ್ಯದ್ ಮೂಸ ರಿಫಾಯಿ ದರ್ಗಾ ಶರೀಫ್ ಗಂಜಿಮಠ ಅವರು ನೆರವೇರಿಸಲಿದ್ದಾರೆ. ಮಂಜೊಟ್ಟಿ ಮಸ್ಜಿದ್‍ನ ಖತೀಬರಾದ ಮುಹಮ್ಮದ್ ಹೈದರ್ ಇಕ್ಬಾಲ್ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ.4 ರಂದು ಅಬ್ದುಲ್ ಹಮೀದ್ ಫೈಝಿ, ಕಿಲ್ಲೂರು ಖತೀಬರು ಜುಮಾ ಮಸ್ಜಿದ್ ಅರೆಕ್ಕಲ ಮಂಗಳೂರು ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜಮಲಾಬಾದ್ ಮಸ್ಜಿದ್‍ನ ಖತೀಬರಾದ ಅಬ್ದುಲ್ ಖಾದರ್ ಮಿಸ್ಬಾಹಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜ 5 ರಂದು ಅಸ್ಸೈಯಿದ್ ಝೈನುಲ್ ಅಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ದುವಾ ನೆರವೇರಿಸಲಿದ್ದಾರೆ. ಪುತ್ರಬೈಲು ಅಲ್ ಮಶ್‍ಹೂದ್ ಜುಮಾ ಮಸೀದಿಯ ಖತೀಬರಾದ ಅಬ್ದುರಝಾಕ್ ಮುಖ್ಯ ಪ್ರಬಾಷಣ ಮಾಡಲಿದ್ದಾರೆ.  

ಇತಿಹಾಸ ಪ್ರಸಿದ್ದವಾಗಿರುವ ಜಮಲಾಬಾದ್ ಉರೂಸ್ ಕಾರ್ಯಕ್ರಮಗಳು ಪ್ರತಿದಿನ ಸಂಜೆ ನಡೆಯಲಿದ್ದು ಭಕ್ತರಿಗೆ ಹರಕೆ ಕಾಣಿಕೆಗಳನ್ನು  ಸಲ್ಲಿಸಬಹುದಾಗಿದೆ ಎಂದು ಮಸೀದಿಯ ಅಧ್ಯಕ್ಷ ಸೈಯ್ಯದ್ ಹಬೀಬ್ ಹಾಜಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News