×
Ad

ಜ.3: ಕ್ರಿಸ್ಟಲ್ ಲೈಟ್ಸ್ ಶೋರೂಂ ಶುಭಾರಂಭ

Update: 2020-01-02 20:31 IST

ಮಂಗಳೂರು, ಜ.2: ನೂತನ ಕ್ರಿಸ್ಟಲ್ ಲೈಟ್ಸ್ ಶೋರೂಂ ಜ.3ರಂದು ಸಂಜೆ 4:30ಕ್ಕೆ ನಗರದ ಪಾಂಡೇಶ್ವರದ ಶ್ರೀನಿವಾಸ್ ಕಾಲೇಜು ಸಮೀಪದ ನೌಫಲ್ ದಿ ಅವಂಟ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.

ನೂತನ ಕ್ರಿಸ್ಟಲ್ ಲೈಟ್ಸ್ ಶೋರೂಂನ್ನು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಕಮರ್ಶಿಯಲ್ ಲೈಟ್ಸ್ ಸೆಕ್ಷನ್‌ನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶೇಕ್ ಮುಹಮ್ಮದ್ ಸಾಕಿಬ್ ಸಲೀಂ ಉಮರಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ನೌಫಲ್ ಗ್ರೂಪ್‌ನ ಮೊಯಿದಿನ್ ನೌಫಲ್, ಪೋರ್ಟ್ ವಾರ್ಡ್ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಮಂಗಳಾದೇವಿ ವಾರ್ಡ್ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News