×
Ad

ತೆಂಕನಿಡಿಯೂರು: ಕ್ಯಾಂಪಸ್ ಆಯ್ಕೆ

Update: 2020-01-02 20:52 IST

ಉಡುಪಿ, ಜ.2: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜನವರಿ 8ರಂದು ಮಂಗಳೂರಿನ ಪ್ರತಿಷ್ಠಿತ ಸಾಪ್ಟ್‌ವೇರ್ ಸಂಸ್ಥೆ ದಿಯಾ (ಗ್ಲೋ ಟಚ್ ಟೆಕ್ನಾಲಜಿ) ನೇರ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ ನಡೆಸಲಿದೆ.

ಈಗಾಗಲೇ ಬಿಎಸ್ಸಿ, ಸಿಬಿಎ, ಎಂಸಿಎ, ಎಂಎಸ್ಸಿ, ಬಿಇ (ಸಿವಿಲ್ ಮತ್ತು ಮೆಕ್ಯಾನಿಕಲ್ ಹೊರತು ಪಡಿಸಿ), ಬಿಕಾಂ (ಕಂಪ್ಯೂಟರ್ ಅಪ್ಲಿಕೇಷನ್) ಮುಗಿಸಿರುವ ಅಭ್ಯರ್ಥಿಗಳು ಬೆಳಗ್ಗೆ 9:30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಪದವಿ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ ಅಂಕಪಟ್ಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News