ಪಿಲಿಕುಲ ಜೈವಿಕ ಉದ್ಯಾವನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Update: 2020-01-02 15:43 GMT

ಮಂಗಳೂರು, ಜ.2: ಪಿಲಿಕುಳದ ಜೈವಿಕ ಉದ್ಯಾವನದಲ್ಲಿ ಪ್ರಾಣಿ ಕ್ಷೇಮಾಭಿವೃದ್ಧಿ 2020ರ ಪ್ರಯುಕ್ತ ಜ.26ರಂದು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

‘ಪ್ರಾಣಿ ಕ್ಷೇಮಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧದ ವಿಷಯವಾಗಿದೆ. ಈ ಸ್ಪರ್ಧೆಯು ಎರಡು ವಿಭಾಗಗಳಾಗಿ ನಡೆಯಲಿದೆ. ಪ್ರಥಮ ವಿಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ದ್ವಿತೀಯ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ನೀಡಲಾಗುವುದು.

ಸ್ವರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಬಂಧಗಳು 1,500 ಅಕ್ಷರಗಳಿಗೆ ಮೀರದಂತೆ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಬರೆದು ಜ.24ರ ಒಳಗಾಗಿ ಪಿಲಿಕುಳ ಜೈವಿಕ ಉದ್ಯಾನವನ, ವಾಮಂಜೂರು ಅಂಚೆ, ಮಂಗಳೂರು-575028, ವಿಳಾಸಕ್ಕೆ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪಿಲಿಕುಳ ಜೈವಿಕ ಉದ್ಯಾನವನ, ವಾಮಂಜೂರು ಅಂಚೆ, ಮಂಗಳೂರು ದೂ.ಸಂ.: 0824 22633000, 9980187057 ಹಾಗೂ ವೆಬ್‌ಸೈಟ್ www.pilikulazoo.com ನ್ನು ಸಂಪರ್ಕಿಸಲು ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News