ಮೂಡುಬಿದಿರೆ: 80ನೇ ಅ. ಭಾ. ಅಂತರ್ ವಿ.ವಿ ಕ್ರೀಡಾಕೂಟ; ಕೂಟ ದಾಖಲೆ
ಮೂಡುಬಿದಿರೆ: ಗುರುವಾರ ಮುಂಜಾನೆ 6.30ಕ್ಕೆ ಪ್ರಾರಂಭವಾದ ಕ್ರೀಡಾಕೂಟದಲ್ಲಿ ಪ್ರತಾಪ್ ನರೇಂದರ್ ( 10,000ಮೀ) ಇವರು ಹೊಸ ಕೂಟ ದಾಖಲೆಯನ್ನು ಮಾಡಿದ್ದಾರೆ.
10,000 ಮೀಟರ್ ಓಟ (ಪುರುಷರ ವಿಭಾಗ)
1. ಪ್ರತಾಪ್ ನರೇಂದರ್ - ಮಂಗಳೂರು ವಿವಿ- 29:42:19- ಕೂಟ ದಾಖಲೆ ( ಆಳ್ವಾಸ್ ಕಾಲೇಜು)
2. ಕಿಸನ್ ತದ್ವಿ - ಸಾವಿತ್ರಿ ಬಾಯಿ ಫುಲೆ ಪುಣೆ ವಿವಿ - 30:57:12
3. ಯಾದವ್ ಸಂತೋಷ್ - ಯುನಿವರ್ಸಿಟಿ ಆಫ್ ಕಲ್ಕತ್ತ - 30:57:29
4. ಸೂರಜ್ - ಮಹರ್ಷಿ ದಯಾನಂದ ವಿವಿ - 31:23:44
5. ರಾಮಚಂದ್ರ ಭೋಸ್ಲೆ ಎ – ಎಸ್.ಆರ್.ಟಿ ಮರಾಟವಾಡ ವಿವಿ- 31:25:90
6. ಯಾದವ್ ರೋಹಿತ್ – ರಾಜೀವ್ ಗಾಂಧಿ ಆರೋಗ್ಯ ವಿವಿ ಬೆಂಗಳೂರು - 31:43:47
10,000 ಮೀಟರ್ ಓಟ ( ಮಹಿಳೆಯರ ವಿಭಾಗ)
1. ಸೋನುನ್ ಪೂನಮ್ - ಸಾವಿತ್ರಿಬಾಯಿ ಫುಲೆ ಪುಣೆ ವಿವಿ- 36:00:32
2. ಕೆ ಎಮ್ ಅಮೃತ ಪಟೇಲ್ – ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ,ವಾರಣಾಸಿ- 36:01:98
3. ಸೋನಿಕಾ – ಮಹರ್ಷಿ ದಯಾನಂದ ವಿವಿ - 36:02:04
4. ರೀಮಾ ಪಟೇಲ್ - ಪಂಜಾಬ್ ವಿವಿ, ಪಟಿಯಾಲ- 36:47:37
5. ಚೈತ್ರ ದೇವಾಡಿಗ – ಮಂಗಳೂರು ವಿವಿ - 36:52:79
6. ರೀನು – ಚೌಧರಿ ರಣಬೀರ್ ಸಿಂಗ್ ವಿವಿ - 36:53:36
"ದಾಖಲೆ ನಿರ್ಮಿಸಿದ್ದು ಖುಷಿ ತಂದಿದೆ. ಕಳೆದ ಬಾರಿಯ ಓಟವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಹಿಂದಿನ ದಾಖಲೆ ನಿರ್ಮಿಸಿದ ಮಂಗಳೂರು ವಿವಿ ರಂಜಿತ್ ಕುಮಾರ್ ಪಟೇಲ್ ನನ್ನ ಸೀನಿಯರ್ ಹಾಗೂ ರೂಮೇಟ್ ಆಗಿದ್ದರು. ವಿಜಯ್ ಸಿಂಗ್ ಅವರು ನನಗೆ ತರಬೇತಿ ನೀಡಿದ್ದು, ಹೊಸ ದಾಖಲೆಯನ್ನು ಮಾಡಿದ್ದು ಹರ್ಷ ತಂದಿದೆ.’’
-ಪ್ರತಾಪ್ ನರೇಂದರ್ (ನೂತನ ಕೂಟ ದಾಖಲೆ 10,000ಮೀ)
"ನಾನು ದಕ್ಷಿಣ ಕನ್ನಡಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಇಲ್ಲಿ ಸೆಕೆಯಿದ್ದರೂ ತುಂಬಾ ಶ್ರಮವಹಿಸಿ ಓಟದಲ್ಲಿ ಭಾಗವಹಿಸುತ್ತಿದ್ದೇನೆ. ಆಳ್ವಾಸ್‍ಗೆ ಬಂದಿದ್ದು ಖುಷಿಯಾಗಿದೆ. ಇನ್ನೂ ಹೆಚ್ಚಿನ ರೆಕಾಡ್ರ್ಸ್ ಬೀಟ್ ಮಾಡುವ ಹಂಬಲವಿದೆ. ಜೀವನದಲ್ಲಿ ನಮ್ಮಲ್ಲಿರುವ ಸ್ವತ್ತುಗಳು ಮಹತ್ವವೆನಿಸುವುದಿಲ್ಲ. ಆದರೆ ನಮ್ಮ ಸಾಧನೆಗಳು ಮಾತ್ರ ಬಹುಕಾಲವಿರುತ್ತದೆ.’’
-ಅಕ್ಷಯ್, (100ಮೀ ಓಟಗಾರ) ಡಿಸಿಅರ್‍ಯುಎಸ್‍ಟಿ ಯುನಿವರ್ಸಿಟಿ ಮುರ್ತಾಲ್, ಹರಿಯಾಣ
"ಎರಡನೇ ಬಾರಿಗೆ ಆಳ್ವಾಸ್‍ಗೆ ಬಂದಿರುವೆ. ಇಲ್ಲಿನ ವ್ಯವಸ್ಥೆಗಳು ಬಹಳ ಉತ್ತಮವಾಗಿವೆ. ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟವಾದರೂ ಹೆಚ್ಚಿನ ಪ್ರಯತ್ನದಿಂದ ಕೂಟ ದಾಖಲೆ ನಿರ್ಮಿಸಬೇಕೆಂಬುವುದು ನನ್ನ ಆಸೆ. ಆರೋಗ್ಯ ಮತ್ತು ಸಂತಸ ಎರಡೂ ಇರುವುದರಿಂದ ಪ್ರತಿಯೊಂದು ಹಂತಗಳು ಸರಳವೆನಿಸುತ್ತಿದೆ.’’
-ಉತ್ಕರ್ಷ ಲೆಂಡೆ, (100 ಮೀ ಓಟಗಾರ್ತಿ, ರಾಜ್ಯ ಕೂಟ ದಾಖಲೆ ಮತ್ತು ಕಂಚಿನ ಪದಕ ವಿಜೇತೆ), ರಾಷ್ಟ್ರಸಂತ ತುಕುಡೋಜಿ ಮಹಾರಾಜ್ ನಾಗ್‍ಪುರ್ ಯುನಿವರ್ಸಿಟಿ