ಜ.10ರಿಂದ ಅನುದಾನಿತ ಶಾಲಾ ಕಾಲೇಜು ನೌಕರರ ಪ್ರತಿಭಟನೆ
Update: 2020-01-02 22:53 IST
ಉಡುಪಿ, ಜ.2: 2006ರ ಎ.1ರ ನಂತರ ಸರಕಾರದಿಂದ ಅನುಮೋದನೆ ಪಡೆದ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೆ ಎನ್‌ಪಿಎಸ್, ನಿಶ್ಚಿತ ಪಿಂಚಣಿ, ಡಿಸಿಆರ್‌ಜಿ ಸೌಲಭ್ಯಗಳನ್ನು ಸರಕಾರ ನೀಡದೇ ಇರುವುದರಿಂದ ಜ.10ರಿಂದ ಬೆಂಗಳೂರಿನ ಫ್ರೀಡಂ ಫಾರ್ಕ್‌ನಲ್ಲಿ ಅಹೋರಾತ್ರಿ ಸತ್ಯಾಗ್ರಹ ವನ್ನು ಅನಿರ್ಧಿಷ್ಟಾವಧಿಗೆ ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನಿರ್ಧರಿಸಿದೆ.
ಈ ಧರಣಿ ಸತ್ಯಾಗ್ರಹದಲ್ಲಿ ಉಡುಪಿ ಜಿಲ್ಲಾ ಪಿಂಚಣಿ ವಂಚಿತ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಸಹ ಭಾಗವಹಿಸಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಬಯಸುವವರು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಜ.10ರಂದು ಬಂದು ಪ್ರತಿಭಟನೆಯನ್ನು ಬೆಂಬಲಿಸಬೇಕೆಂದು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೇಶ ಶೆಟ್ಟಿಗಾರ್ ಮನವಿ ಮಾಡಿದ್ದಾರೆ.