×
Ad

ಹಿರಿಯ ನಾಗರಿಕರಿಗಾಗಿ ‘ಸಾರ್ಥಕ ವಸಂತ’

Update: 2020-01-02 22:53 IST

ಉಡುಪಿ, ಜ.2: ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲೂ ಸುಂದರ ಬದುಕನ್ನು ಜೀವಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಮಣಿಪಾಲ ವಸಂತಿ ಎ.ಪೈ ಫೌಂಡೇಷನ್ ಹಾಗೂ ಕಮಲಾ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಸಹಯೋಗದೊಂದಿಗೆ ‘ಸಾರ್ಥಕ ವಸಂತ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದೇ ಜ.12ರ ರವಿವಾರ ಈ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ವಿವಿಧ ಕ್ಷೇತ್ರಗಳ ಹಿರಿಯ ತಜ್ಞರು, ವೃದ್ಧಾಪ್ಯದ ಅವಧಿಯನ್ನು ಫಲಪ್ರದವಾಗಿ ಹಾಗೂ ಸಂತೋಷಕರವಾಗಿ ಕಳೆಯುವ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಿದ್ದಾರೆ.

ಹಿರಿಯ ನಾಗರಿಕರಿಗೆ ಮುಕ್ತ ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಮೊದಲು ಬರುವ 30 ಮಂದಿ ಹಿರಿಯರಿಗೆ ಹಾಗೂ ವೃದ್ಧ ದಂಪತಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಜಗದೀಶ್ ಪೈ (9482773764) ಅಥವಾ ಗುರುಪ್ರಕಾಶ್ ಶೆಟ್ಟಿ (9449595082) ಇವರನ್ನು ಸಂಪರ್ಕಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News