×
Ad

‘ಸನ್‌ಪ್ರೀಮಿಯಂ’ ವಿಜೇತ ಗ್ರಾಹಕರಿಗೆ ಚಿನ್ನದ ನಾಣ್ಯ ವಿತರಣೆ

Update: 2020-01-02 23:33 IST

ಮಂಗಳೂರು, ಜ.2: ಸೂರ್ಯಕಾಂತಿ ಎಣ್ಣೆ ತಯಾರಿಕಾ ಸಂಸ್ಥೆಯಾದ ‘ಅನಘಾ ರಿಫಾನರೀಸ್’ ಕಳೆದ ನವರಾತ್ರಿ ಹಾಗೂ ದೀಪಾವಳಿಯ ಸಂದರ್ಭ ಗ್ರಾಹಕರಿಗಾಗಿ ಆಯೋಜಿಸಿದ್ದ ‘ಸನ್‌ಪ್ರೀಮಿಯಂ ಸೂರ್ಯಕಾಂತಿ ಎಣ್ಣೆ ಖರೀದಿಸಿ, ಚಿನ್ನದ ನಾಣ್ಯ ಗೆಲ್ಲಿ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಗುರುವಾರ ನಗರದ ಖಾಸಗಿ ಹೊಟೇಲಿನಲ್ಲಿ ಜರುಗಿತು.

ಹಬ್ಬದ ಊಟಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ಹಬ್ಬದ ಸಂದರ್ಭ 1 ಲೀ. ಸನ್‌ಪ್ರೀಮಿಯಂ ಸೂರ್ಯಕಾಂತಿ ಎಣ್ಣೆ ಖರೀದಿಸಿ, ಪ್ಯಾಕೆಟ್‌ನಲ್ಲಿರುವ ಆಫರ್ ಕೋಡನ್ನು ಗ್ರಾಹಕರು ಎಸ್‌ಎಂಎಸ್ ಮಾಡಲು ಸಂಸ್ಥೆಯು ಸೂಚಿಸಿತ್ತು. ಅದರಂತೆ ಎಸ್‌ಎಂಎಸ್ ಮಾಡಿದ ಗ್ರಾಹಕರ ಪೈಕಿ 100 ಅದೃಷ್ಟಶಾಲಿಯನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ದ.ಕ. ಮತ್ತು ಉಡುಪಿ ಜಿಲ್ಲೆಯ 37 ಮಂದಿ ವಿಜೇತರಿಗೆ ಚಿನ್ನದ ನಾಣ್ಯವನ್ನು ಸಂಸ್ಥೆಯ ಮಾಲಕರು, ಸಿಬ್ಬಂದಿ ವರ್ಗ, ವಿತರಕರ ಸಮ್ಮುಖ ಹಸ್ತಾಂತರಿಸಲಾಯಿತು.

ಸಂಸ್ಥೆಯ ನಿರ್ದೇಶಕ ವೆಂಕಟ್ ಪಣಿ ಮಾತನಾಡಿ, ಅತ್ಯುತ್ಕೃಷ್ಟ ಗುಣಮಟ್ಟದಿಂದ ಕೂಡಿದ ಸನ್‌ಪ್ರೀಮಿಯಂ ರಿಫೈನ್ಡ್ ಸನ್‌ ಫ್ಲವರ್ ಆಯಿಲ್ ಈಗ ಮನೆಮನೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಮಾರಾಟವಾಗುವ ಅಡುಗೆ ಎಣ್ಣೆಗಳಲ್ಲಿ ಸನ್‌ಪ್ರೀಮಿಯಂ ರಿಫೈನ್ಡ್ ಸನ್‌ ಫ್ಲವರ್ ಆಯಿಲ್ ಒಂದಾಗಿದ್ದು, ಸಾಕಷ್ಟು ಬೇಡಿಕೆಯನ್ನು ಪಡೆದಿದೆ. ರಾಜ್ಯದ ಬಹುತೇಕ ಅಂಗಡಿಗಳಲ್ಲಿ ಅರ್ಧ, 1, 15 ಲೀಟರ್, 15 ಕೆ.ಜಿ. ಟಿನ್ ಮತ್ತು 5 ಲೀಟರ್ ಕ್ಯಾನ್‌ನಲ್ಲಿ ಲಭ್ಯವಿದೆ. ಸಂಸ್ಥೆಯು ನಡೆಸಿದ ಈ ಸ್ಪರ್ಧೆಯ ಬಗ್ಗೆ ಉಭಯ ಜಿಲ್ಲೆಗಳಲ್ಲಿ ವಿತರಕರು ಹಾಗೂ ರಿಟೈಲರ್ಸ್‌ನವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಮಾರಾಟವನ್ನು ಇನ್ನಷ್ಟು ಉತ್ತೇಜಿಸಿದೆ ಎಂದರು.

ಈ ಸಂದರ್ಭ ಸಂಸ್ಥೆಯ ಆಡಳಿತ ನಿರ್ದೇಶಕ ಸಾಂಬಶಿವ ರಾವ್, ಪ್ರಮುಖ ವಿತರಕರಾದ ಪ್ರಶಾಂತ್ ಕಾಮತ್ ಮತ್ತು ಎಂ.ಆರ್. ರಝಾಕ್ ಮತ್ತಿತರರು ಉಪಸ್ಥಿತರಿದ್ದರು. ಸೌಜನ್ಯಾ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರಿನಲ್ಲಿ ಆರಂಭಿಸಿದ ಸನ್‌ಪ್ರೀಮಿಯಂ ರಿಫೈನ್ಡ್ ಸನ್‌ ಫ್ಲವರ್ ಆಯಿಲ್ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಸೂರ್ಯಕಾಂತಿ ಎಣ್ಣೆಯಿಂದ ತಯಾರಿಸಿದ ಸನ್ ಪ್ರೀಮಿಯಂ ಸನ್‌ ಫ್ಲವರ್ ಆಯಿಲ್ ಪ್ರತಿ ಹಂತದಲ್ಲೂ ಗುಣಮಟ್ಟ ಮತ್ತು ಆರೋಗ್ಯದ ವಿಚಾರದಲ್ಲಿ ಗಮನ ಹರಿಸುತ್ತಿದೆ. ಇದರಲ್ಲಿ ವಿಟಮಿನ್ ಎ, ಡಿ ಮತ್ತು ಇ ಇವೆ. ದೇಹ ಆರೋಗ್ಯ ಕಾಪಾಡಲು ಇದು ಪ್ರಮುಖ ಪಾತ್ರವಹಿಸುತ್ತದೆ. ವಿಟಾಮಿನ್ ಎ ದೃಷ್ಟಿಗೆ ಪೂರಕವಾದರೆ, ವಿಟಮಿನ್ ‘ಡಿ’ಯಿಂದ ದೇಹದ ಮೂಳೆಗಳು ಸದೃಢಗೊಳ್ಳುತ್ತವೆ ಮತ್ತು ವಿಟಮಿನ್ ’ಇ’ಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ದೇಹದ ರಕ್ತ ಕಣಗಳು ವೃದ್ಧಿಗೊಳ್ಳುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News