×
Ad

​ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಇಂದಿರಾ ಹೆಗ್ಗಡೆ

Update: 2020-01-03 17:41 IST

ಮಂಗಳೂರು,ಜ.3: ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಸಂತ ಅಗ್ನೇಸ್ ಕಾಲೇಜಿನಲ್ಲಿ ಜ.29ರಂದು ನಡೆಯಲಿರುವ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ-ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಆಯ್ಕೆಯಾಗಿದ್ದಾರೆ.

ಡಾ. ಇಂದಿರಾ ಹೆಗ್ಗಡೆ ಮೂರು ಕಥಾ ಸಂಕಲನ, ನಾಲ್ಕು ಕಾದಂಬರಿ, ಒಂದು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಎಂಬ ಅನುಭವ ಕಥನವನ್ನು ಎಸ್. ಆರ್. ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ರಚಿಸಿದ ‘ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಇಂಗ್ಲಿಷ್‌ಗೂ ಅನುವಾದಗೊಂಡಿದೆ.

ಕರ್ನಾಟಕ ಜಾನಪದ ಆಕಾಡಮಿಯಿಂದ ಜಾನಪದ ತಜ್ಞೆ ಗೌರವ ಪ್ರಶಸ್ತಿ , ರಾಣಿ ಅಬ್ಬಕ್ಕ ಪ್ರಶಸ್ತಿ ಸಹಿತ ವಿಧ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಗಳ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ದೇಶ ವಿದೇಶದ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳ ಸನ್ಮಾನಗಳನ್ನು ಸ್ವೀಕರಿಸಿರುವ ಡಾ. ಇಂದಿರಾ ಹೆಗ್ಡೆ, ಸಾಹಿತ್ಯ ಅಕಾಡಮಿಯ ಪ್ರಶಸ್ತಿ, ಕಮಣ ರಂಗಸ್ವಾಮಿ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ವೃತ್ತಿರಂಗದಲ್ಲಿ ಪಡೆದಿರುವ ಇವರು ದೇಶ-ವಿದೇಶದ ಪ್ರವಾಸಾನುಭವ ಹೊಂದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News