×
Ad

​ಜ.29: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2020-01-03 17:51 IST

ಮಂಗಳೂರು, ಜ.3: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯು ತಾಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಬಿ. ಶೆಟ್ಟಿಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಜ.29ರಂದು ನಗರದ ಸಂತ ಆಗ್ನೆಸ್ ಕಾಲೇಜಿನಲ್ಲಿ ನಡೆಸಲು ನಿರ್ಧರಿಸಲಾಯಿತು.

ಕಾರ್ಯದರ್ಶಿ ಡಾ. ಪದ್ಮನಾಭ ಭಟ್, ದೇವಕಿ ಅಚ್ಯುತ, ಗೌರವ ಕೋಶಾಧಿಕಾರಿ ಕೃಷ್ಣ ಮೂರ್ತಿ, ಸದಸ್ಯೆಯರಾದ ಚೇತನಾ, ಜಯಲಕ್ಷ್ಮಿ ಭಟ್, ಅರುಣಾ ನಾಗರಾಜ್, ಜಯಲಕ್ಷ್ಮುಬಿ.ಆರ್., ರಘು ಇಡ್ಕಿದು, ದಯಾಮಣಿ ಕೋಟ್ಯಾನ್, ಮೇರಿ ಮಿರಾಂಡ ಉಪಸ್ಥಿರರಿದ್ದರು.

ಕೃತಿ ಬಿಡುಗಡೆಗೆ ಅವಕಾಶ: ತಾಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಕೃತಿಗಳ ಬಿಡುಗಡೆಗೆ ಅವಕಾಶವಿದ್ದು ಆಸಕ್ತ ಸಾಹಿತಿಗಳು ಪದ್ಮನಾಭ ಭಟ್ ಎಕ್ಕಾರು, ಕಾರ್ಯದರ್ಶಿಗಳು, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ (944854486) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News