ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್: ಸುರತ್ಕಲ್ ನಲ್ಲಿ ನೂತನ ಮಳಿಗೆ ಶುಭಾರಂಭ

Update: 2020-01-03 14:37 GMT

ಮಂಗಳೂರು, ಜ.3: ದಕ್ಷಿಣ ಭಾರತದ ಅತ್ಯಂತ ಹೆಸರಾಂತ ವಿಶ್ವಾಸಾರ್ಹ ಸ್ವರ್ಣಾಭರಣಗಳ ಸಂಸ್ಥೆ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ 11ನೇ ಶೋರೂಂ ಸುರತ್ಕಲ್‌ನ ಎಚ್‌ಎನ್‌ಜಿಸಿ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ನೂತನ ಮಳಿಗೆಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಸ್ಲಾಂ ವ್ಯಾಪಾರ, ಉದ್ಯಮಕ್ಕೆ ಪ್ರೋತ್ಸಾಹಿಸಿದೆ. ಅಂತೆಯೇ ಪ್ಯಾಪಾರ ಸಂಸ್ಥೆಗಳು ಸೌಹಾರ್ದ ನೆಲೆ ನಿಲ್ಲಿಸಲು ಅತ್ಯಂತ ಸಹಕಾರಿ ಎಂದು ಅಭಿಪ್ರಾಯಿಸಿ ಸಂಸ್ಥೆಗೆ ಶುಭ ಹಾರೈಸಿದರು.

ವಜ್ರಾಭರಣ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹೆಸರಿಗೆ ತಕ್ಕಂತೆ ಅನ್ವರ್ಥಕ ನಾಮ ಎಂದು ಪ್ರಶಂಶಿಸಿದರು. ಹಣದ ಮೌಲ್ಯದ ಉಳಿವಿಗಾಗಿ ಭೂಮಿ ಹಾಗೂ ಚಿನ್ನಾಭರಣದಲ್ಲಿ ತೊಡಗಿಸುವುದು ಉತ್ತಮ ಎಂದರು.

ಅನ್‌ಕಟ್ ಡೈಮಂಡ್ ವಿಭಾಗಕ್ಕೆ ಚೊಕ್ಕಬೆಟ್ಟು ಎಂಜೆಎಂ ಜುಮಾ ಮಸೀದಿಯ ಖತೀಬ್ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚಾಲನೆ ನೀಡಿ ಸಂಸ್ಥೆಗೆ ಶುಭ ಕೋರಿದರು.

ಬ್ರೈಡಲ್ ಗೋಲ್ಡ್ ವಿಭಾಗವನ್ನು ಸೆಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ.ಫಾ. ಪೌಲ್ ಪಿಂಟೊ ಉದ್ಘಾಟಿಸಿದರು. ಲೈಟ್‌ವೈಟ್ ವಿಭಾಗವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ, ಡೈಲಿವೇರ್ ವಿಭಾಗವನ್ನು ಮಾಜಿ ಶಾಸಕ ಮೊಯ್ದಿನ್ ಬಾವ, ವಾಚ್‌ಗಳ ವಿಭಾಗವನ್ನು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಯನಾ ಆರ್. ಕೋಟ್ಯಾನ್, ಬೆಳ್ಳಿಯ ವಿಭಾಗವನ್ನು ಕೃಷ್ಣಾಪುರ ಮಿಸ್ಬಾಹ್ ಮಹಿಳಾ ಕಾಲೇಜಿನ ಮುಖ್ಯಸ್ಥ ಬಿ.ಎಂ. ಮುಮ್ತಾಝ್ ಅಲಿ, ಮಾಸಿಕ ಯೋಜನೆ ವಿಭಾಗವನ್ನು ಎಚ್‌ಎನ್‌ಜಿಸಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಸಿಇಒ ಪಿ.ಇಸ್ಮಾಯೀಲ್ ಅಹ್ಮದ್ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಈ ಸಂದರ್ಭ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಡೈರೆಕ್ಟರ್ ಡಾ.ಟಿ.ಎಂ. ಅಬ್ದುಲ್ ರವೂಫ್, ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಟಿ.ಎಂ. ಅಬ್ದುಲ್ ರಹೀಂ, ಕೃಷ್ಣಾಪುರ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶುಭಾರಂಭದ ಕೊಡುಗೆಯಾಗಿ ಗ್ರಾಹಕರಿಗೆ ಗೋಲ್ಡ್ ಮೇಕಿಂಗ್ ಶುಲ್ಕದಲ್ಲಿ ಪ್ರತೀ ಗ್ರಾಂ ಮೇಲೆ 150 ರೂ. ರಿಯಾಯಿತಿ, 20,000 ರೂ.ಗಿಂತ ಹೆಚ್ಚಿನ ಖರೀದಿ ಮಾಡುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ, ಡೈಮಂಡ್ ಕ್ಯಾರಟ್ ಬೆಲೆಯ ಮೇಲೆ 7,000 ರೂ. ರಿಯಾಯಿತಿ ಸಹಿತ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News