ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಸದಾಫ್ ಜಫರ್, ಎಸ್.ಆರ್. ದಾರಾಪುರಿ ಸಹಿತ 58 ಮಂದಿಗೆ ಜಾಮೀನು

Update: 2020-01-03 16:28 GMT

ಹೊಸದಿಲ್ಲಿ/ಲಕ್ನೋ, ಜ. 3: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದಲ್ಲಿ ಡಿಸೆಂಬರ್ 13ರಂದು ನಡೆದ ಪ್ರತಿಭಟನೆಯಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತೆ ಸದಾಫ್ ಜಫರ್, ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್. ದಾರಾಪುರಿ, ಹೋರಾಟಗಾರರಾದ ಪವನ್, ಅಂಬೇಡ್ಕರ್, ಮುಹಮ್ಮದ್ ಶೊಹೈಬ್ ಸಹಿತ 58 ಮಂದಿಯನ್ನು ವಾರಣಾಸಿಯ ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.

ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಬಳಿಕ, ಅದು ಜಿಲ್ಲಾ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. ಹಝರತ್‌ಗಂಜ್ ಪೊಲೀಸರು ಜಫರ್ ಹಾಗೂ ಇತರರ ವಿರುದ್ದ ಭಾರತ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಜಫರ್ ಅವರ ಬಂಧನ ಕಾನೂನು ಬಾಹಿರ. ಆದುದರಿಂದ ಅವರ ವಿರುದ್ಧದ ಪ್ರಥಮ ಮಾಹಿತಿ ವರದಿ ರದ್ದುಗೊಳಿಸಬೇಕು ಎಂದು ಕೋರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು.

ಈ ಬಗ್ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರಕಾರಕ್ಕೆ ಉಚ್ಚ ನ್ಯಾಯಾಲಯ ಗುರುವಾರ ಸೂಚಿಸಿತ್ತು. ವಾರಣಾಸಿ ನ್ಯಾಯಾಲಯ ಬುಧವಾರ ಹೋರಾಟಗಾರರಾದ ಎಕ್ತಾ ದಂಪತಿ, ರವಿಶಂಕರ್ ಹಾಗೂ ಇತ  56 ಮಂದಿಗೆ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News