×
Ad

ಮೃತ ಸೇನಾಧಿಕಾರಿಯ ಸ್ಥಾನ ತುಂಬಿಸಿದ ಇರಾನ್

Update: 2020-01-03 23:38 IST

ಟೆಹರಾನ್, ಜ. 3: ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ವಿದೇಶಿ ಘಟಕ ಖುದ್ಸ್ ಫೋರ್ಸ್‌ನ ಮುಖ್ಯಸ್ಥ ಕಾಸಿಮ್ ಸುಲೈಮಾನಿಯ ಹತ್ಯೆಯ ಬಳಿಕ, ಪಡೆಯ ಉಪ ಮುಖ್ಯಸ್ಥ ಇಸ್ಮಾಯೀಲ್ ಖಾನಿಯನ್ನು ಪಡೆಯ ಮುಖ್ಯಸ್ಥನಾಗಿ ಶುಕ್ರವಾರ ನೇಮಿಸಲಾಗಿದೆ.

 ‘‘ಜನರಲ್ ಕಾಸಿಮ್ ಸುಲೈಮಾನಿ ಹುತಾತ್ಮರಾದ ಬಳಿಕ, ಬ್ರಿಗೇಡಿಯರ್ ಜನರಲ್ ಇಸ್ಮಾಯೀಲ್ ಖಾನಿಯನ್ನು ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್‌ನ ಖುದ್ಸ್ ಫೋರ್ಸ್‌ನ ಮುಖ್ಯಸ್ಥರಾಗಿ ನಾನು ನೇಮಿಸುತ್ತೇನೆ’’ ಎಂದು ದೇಶದ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News