ಅಳಿಕೆಯಲ್ಲಿ ಸ್ವೀಪ್ ಅಭಿಯಾನ
ಮಂಗಳೂರು, ಜ.3: ಜನ ಶಿಕ್ಷಣ ಟ್ರಸ್ಟ್, ಹಂಗರ್ ಪೋಜೆಕ್ಟ್, ಗ್ರಾಪಂ ಅಳಿಕೆ, ಸುಗ್ರಾಮ ಸಂಘ ಮತ್ತು ಸ್ವ ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಅಳಿಕೆ ಗ್ರಾಪಂ ಸಭಾಂಗಣದಲ್ಲಿ ಸ್ವೀಪ್-ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಮಹಿಳಾ ಸಶಕ್ತೀಕರಣ ಅಭಿಯಾನ ನಡೆಯಿತು.
ಮಹಿಳೆ ಮತ್ತು ಗ್ರಾಪಂ, ಮಹಿಳೆ ಮತ್ತು ಚುನಾವಣೆ ಕುರಿತು ಚಿತ್ರ ಪ್ರದರ್ಶನ, ಮಾಹಿತಿ ವಿನಿಮಯ, ಸಂವಾದ ಚರ್ಚೆ ಮೂಲಕ ಮತದಾನದ ಮಹತ್ವ ಮತ್ತು ಪಂಚಾಯತ್ ಚುನಾವಣಾ ಪ್ರಕ್ರಿಯೆ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಲಾುತು. ತ್ಯಾಜ್ಯ ಮುಕ್ತ, ಸಂಪೂರ್ಣ ಸ್ವಚ್ಛ ಹಸಿರು ಗ್ರಾಮ ನಿರ್ಮಾಣದ ಬಗ್ಗೆಯೂ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಓಂಬುಡ್ಸ್‌ಮೆನ್ ಶೀನ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್, ಸುಗ್ರಾಮ ಸಂಘದ ಸದಸ್ಯೆಯರಾದ ಕವಿತಾ, ಮೂಕಾಂಬಿಕಾ ಭಟ್, ಗಿರಿಜಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.